6

ಎರಡು ಲಾರಿಗಳ ನಡುವೆ ಅಪಘಾತ: ಪೊಲೀಸ್ ದೂರು

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ ನಡುವೆ ಅಡ್ಡಾದಿಡ್ಡಿ ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಗುದ್ದಿದ್ದು, ಎರಡು ಲಾರಿಗಳ ನಡುವೆ ನಡೆದ ಅಪಘಾತದಲ್ಲಿ ಎರಡೂ ವಾಹನಗಳು ಜಖಂ ಆಗಿದೆ.

ಕುಣಗಿನಕೊಪ್ಪ ಕ್ರಾಸಿನ ಬಳಿಯ ಆಕಾಶ ರೋಡ್‌ಲೈನ್ ಗ್ಯಾರೇಜ್ ಬಳಿ ಅಕ್ತರ್ ಅಲಿ ಎಂಬಾತ ತಾನು ಓಡಿಸುವ ಲಾರಿಯನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದ. ನ 22ರ ರಾತ್ರಿ ಬೆಳಗಾವಿಯ ಈರಣ್ಣ ಯಮ್ಮನಕಟ್ಟಿ ತಾನು ಓಡಿಸುತ್ತಿದ್ದ ಲಾರಿಯನ್ನು ನಿಂತಿದ್ದ ಲಾರಿಗೆ ಗುದ್ದಿದ. ಇದರಿಂದ ಎರಡು ಲಾರಿಗಳು ಜಖಂ ಆಗಿ, ಇತರೆ ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಯಿತು.

ಅಡ್ಡಾದಿಡ್ಡಿ ನಿಲ್ಲಿಸಿದ ಲಾರಿಯ ವ್ಯವಸ್ಥಾಪಕ ಸಂತೋಷ ವಡ್ಡರ್ ಸ್ಥಳಕ್ಕೆ ತೆರಳಿ ರಸ್ತೆಯ ಮೇಲಿದ್ದ ಅಪಘಾತದ ಲಾರಿಗಳನ್ನು ರಸ್ತೆ ಅಂಚಿಗೆ ನಿಲ್ಲಿಸಿದರು. ಪೊಲೀಸರು ಆಗಮಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು. ಎರಡು ಲಾರಿ ಚಾಲಕರ ವಿರುದ್ಧ ಸಂತೋಷ ವಡ್ಡರ್ ಪೊಲೀಸ್ ದೂರು ದಾಖಲಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page