ಶಿರಸಿ: ಬಂಗಾರದ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ನಾಗರಾಜ ಶೇಟ್ ಕಾಣೆಯಾಗಿದ್ದಾರೆ.
ಅಂಬಾಗಿರಿಯ 4ನೇ ಕ್ರಾಸಿನಲ್ಲಿ ನಾಗರಾಜ ಶೇಟ್ (34) ವಾಸವಾಗಿದ್ದರು. ನ 16ರಂದು ಮನೆಯಲ್ಲಿದ್ದ ಅವರು ಸಂಜೆ 6.30ಕ್ಕೆ ಮನೆಯಿಂದ ಹೊರ ಹೋದವರು ಮರಳಿ ಬಂದಿಲ್ಲ. ಎಲ್ಲಾ ಕಡೆ ಹುಡುಕಾಟ ನಡೆಸಿದರೂ ನಾಗರಾಜ ಶೇಟ್ ಅವರ ಸುಳಿವು ಸಿಕ್ಕಿಲ್ಲ.
ನಾಗರಾಜ ಅವರ ತಾಯಿ ರಾಧಾ ಶೇಟ್ (66) ಅವರು ಸಂಬoಧಿಕರ ಮನೆ ಹಾಗೂ ಪರಿಚಯಸ್ಥರಲ್ಲಿ ಸಹ ಈ ಬಗ್ಗೆ ವಿಚಾರಿಸಿದ್ದಾರೆ. ಆದರೂ, ನಾಗರಾಜ ಶೇಟ್ ಎಲ್ಲಿ ಹೋದರು? ಎಂದು ಗೊತ್ತಾಗಿಲ್ಲ. ಈ `ಹಿನ್ನಲೆ ಅವರನ್ನು ಹುಡುಕಿಕೊಡಿ’ ಎಂದು ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಸಹ ನಾಗರಾಜ ಶೇಟ್ ಅವರ ಹುಡುಕಾಟದಲ್ಲಿದ್ದಾರೆ.







