6

ವಿದ್ಯಾರ್ಥಿಯ ಬೋಳು ಸವರಿದ ಉಪನಿರ್ದೇಶಕ!

ಮುಂಡಗೋಡು: ಸಿನಿಮಾ ನಟನ ಶೈಲಿಯಲ್ಲಿ ತಲೆಗೂದಲು ಬಿಟ್ಟಿದ್ದ ವಿದ್ಯಾರ್ಥಿಯನ್ನು ನೋಡಿದ ಸಮಜ ಕಲ್ಯಾಣ ಇಲಾಖೆ ಉಪನಿರ್ದೆಶಕ ಉಮೇಶ ವೈ ಕೆ ಆ ವಿದ್ಯಾರ್ಥಿಯ ತಲೆ ಬೋಳಿಸಿದ್ದಾರೆ!

ಕರಗಿನಕೊಪ್ಪ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಉದ್ದ ಕೂದಲು ಬಿಟ್ಟಿದ್ದು, ಆತನನ್ನು ನೋಡಿದ ಉಪನಿರ್ದೇಶಕರು ಕ್ಷೌರಿಕನನ್ನು ಕರೆಯಿಸಿ ಕೂದಲು ತೆಗೆಸಿದ್ದಾರೆ. `ನೀವು ಶಿಕ್ಷಣ ಕಲಿಯಲು ಇಲ್ಲಿ ಬರುತ್ತೀರಾ? ಅಥವಾ ಶೋಕಿಗೆ ಬರುತ್ತೀರಾ?’ ಎಂದು ವಿದ್ಯಾರ್ಥಿಗಳನ್ನು ಉಮೇಶ ವೈ ಕೆ ಪ್ರಶ್ನಿಸಿದರು. `ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿ ಆಗಿರಬೇಕು’ ಎಂದು ಹೇಳಿದ ಅವರು ಕೂಡಲೇ ಕ್ಷೌರಿಕನನ್ನು ಕರೆಯಿಸಿ ವಿದ್ಯಾರ್ಥಿಗಳ ಕೂದಲು ಕತ್ತರಿಸಲು ಸೂಚಿಸಿದರು.

ವಿದ್ಯಾರ್ಥಿಗಳನ್ನು ನೋಡಿಕೊಳ್ಳುವ ವಾರ್ಡನ್ ಹಾಗೂ ಶಿಕ್ಷಕರ ಜೊತೆ ಅಡುಗೆ ಸಿಬ್ಬಂದಿಯನ್ನು ಸಹ ಅವರು ತರಾಠೆಗೆ ತೆಗೆದುಕೊಂಡರು. ನಂತರ ನಡೆದ ಶಿಕ್ಷಕರ ಸಭೆಯಲ್ಲಿ ಈ ಬಾರಿ `ಶೈಕ್ಷಣಿಕ ಫಲಿತಾಂಶ ಶೇ 100ರಷ್ಟು ಸಾಧಿಸಬೇಕು. ಅದರ ಬಗ್ಗೆ ಗಮನಕೊಡಿ’ ಎಂದು ಸೂಚಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page