6

ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ: ಪತಂಗವಾಗಿ ನಾ ಹಾರಬಲ್ಲೆ!

ಕುಮಟಾ: ಗೋಕರ್ಣದ ಪತಂಗ ರೆಸಾರ್ಟ ಹಿಂದಿನ ಸಮುದ್ರ ದಡೆಯ ಮೇಲೆ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ದುಬ್ಬನಶಸಿ ಹಾಗೂ ಭಾವಿಕೊಡ್ಲ ಕಡಲತೀರದ ನಡುವೆ ರೆಸಾರ್ಟ ಇದ್ದು, ಅದರ ಹಿಂದಿನ ಪ್ರದೇಶದ ಖಾಲಿ ಜಾಗದಲ್ಲಿ ಕೋಳಿ ಅಂಕ ಆಡಿಸಲಾಗುತ್ತದೆ. ಭಾನುವಾರ ರಾತ್ರಿ ಕೋಳಿ ಅಂಕ ನಡೆಯುವ ವೇಳೆ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಈ ವೇಳೆ ಅಲ್ಲಿದ್ದ ಕೋಳಿಗಳನ್ನು ಸಹ ವಶಕ್ಕೆ ಪಡೆದಿದ್ದಾರೆ.

ಪಿ.ಐ. ವಸಂತ್ ಆಚಾರ್ ಸಮುದ್ರ ವಿಹಾರಕ್ಕೆ ಹೋದಾಗ ಕೋಳಿ ಅಂಕದ ಬಗ್ಗೆ ಮಾಹಿತಿ ಪಡೆದಿದ್ದರು. ನಂತರ ಪಿಎಸ್‌ಐ ಖಾದರ್ ಬಾಷಾ ಅವರ ಜೊತೆ ತಂಡ ರಚಿಸಿಕೊಂಡು ದಾಳಿ ಮಾಡಿದರು. ಹೊನ್ನಾವರ ಕವಲಕ್ಕಿ ಕೋಳಿಗದ್ದೆಯ ವಿನಾಯಕ ರಾಮಾ ನಾಯ್ಕ (38), ಕುಮಟಾ ಶಶಿಹಿತ್ತಲನ ಈಶ್ವರ ಸುಬ್ರಾಯ ಭಂಡಾರಿ (45), ಅಂಕೋಲಾ ಕೇಣಿಯ ಪ್ರಮೋದ ಗಣಪತಿ ಬಂಟ (52), ಅಂಕೋಲಾ ಹೊನ್ನೆಕೇರಿಯ ಸಂಜಯ ರಾಕು ನಾಯ್ಕ(30), ಗೌರೀಶ ಸುರೇಶ ನಾಯ್ಕ (30) ಅವರ ಹೆಡೆಮುರಿ ಕಟ್ಟಿದರು.

ಈ ದಾಳಿಯಲ್ಲಿ ಪೊಲೀಸರಿಗೆ 9940ರೂ ಹಣ ಸಿಕ್ಕಿದೆ. ಎಂಟು ಬೈಕ್, ಕತ್ತಿ ಜೊತೆ ಎರಡು ಹುಂಜವನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page