ಕುಮಟಾ: ಹೊನ್ನಾವರದಿಂದ ಅಂಕೋಲಾ ಕಡೆ ಅಡ್ಡಾದಿಡ್ಡಿಯಾಗಿ ಚಲಿಸುತ್ತಿದ್ದ ಟಾಕ್ಟರ್ ಕುಮಟಾದ ದಿವಿಗಿ ಬಳಿ ರೈತನ ಪ್ರಾಣ ತೆಗೆದಿದೆ.
ಟಾಕ್ಟರ್’ನ ಹಿಂದಿನ ಟ್ರಾಲಿ ಸ್ಕೂಟರಿಗೆ ಗುದ್ದಿದ ಪರಿಣಾಮ ಬೈಕಿನಲ್ಲಿ ಸಂಚರಿಸುತ್ತಿದ್ದ ಪಾಂಡುರoಗ ದೇಶಭಂಡಾರಿ (60) ಎಂಬಾತರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುತ್ತಿದ್ದಾಗ ಸಾವನಪ್ಪಿದ್ದಾರೆ. ಸ್ಕೂಟರಿಗೆ ಗುದ್ದಿದ ನಂತರ ಟಾಕ್ಟರ್ ಚಾಲಕ ವಾಹನವನ್ನು ನಿಲ್ಲಿಸದೇ, ಇನ್ನಷ್ಟು ಜೋರಾಗಿ ಓಡಿಸಿಕೊಂಡು ಹೋಗಿದ್ದು ಪೊಲೀಸರು ಆತನ ಹುಡುಕಾಟದಲ್ಲಿದ್ದಾರೆ.







