6

ಅರಣ್ಯಾಧಿಕಾರಿಗೆ ಗುದ್ದಿದ ಕಾರು: ಮುರಿದ ಕಾಲು!

ಅಂಕೋಲಾ: ಬೈಕಿಗೆ ಪೆಟ್ರೋಲ್ ಹಾಕಿಸಲು ತೆರಳುತ್ತಿದ್ದ ಅರಣ್ಯ ಅಧಿಕಾರಿ ಮಹೇಶ ಮುಂಡಗೇರಿ ಅವರಿಗೆ ಕಾರು ಗುದ್ದಿದೆ. ಪರಿಣಾಮ ಅವರ ಕಾಲಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ.

ಅಂಕೋಲಾದ ಮರಾಠಾಕೇರಿಯಲ್ಲಿ ವಲಯ ಅರಣ್ಯಾಧಿಕಾರಿ ಗ್ರೀಷ್ಮಾ ಪಟಗಾರ ಹಾಗೂ ಅರಣ್ಯ ಅಧಿಕಾರಿ ಮಹೇಶ ಮುಂಡಗೇರಿ ವಾಸವಾಗಿದ್ದರು. ನ 26ರಂದು ಮಹೇಶ ಅವರು ತಮ್ಮ ಬೈಕಿಗೆ ಪೆಟ್ರೋಲ್ ತುಂಬಿಸಲು ಕಾರವಾರ-ಅಂಕೋಲಾ ರಸ್ತೆಯ ಪ್ರಭು ಪೆಟ್ರೋಲ್ ಬಂಕಿನ ಕಡೆ ಹೋಗುತ್ತಿದ್ದರು. ಈ ವೇಳೆ ಅಂಚೆ ಕಚೇರಿ ಕಡೆಯಿಂದ ಜೈ ಹಿಂದ್ ಸರ್ಕಲ್ ಕಡೆ ವೇಗವಾಗಿ ಕಾರೊಂದು ಬಂದಿದ್ದು, ಮಹೇಶ ಅವರು ಓಡಿಸುತ್ತಿದ್ದ ಬೈಕಿಗೆ ಗುದ್ದಿತು.

ಜೈಹಿಂದ್ ಸರ್ಕಲ್ ಹತ್ತಿರ ನಡೆದ ಈ ಅಪಘಾತದಲ್ಲಿ ಮಹೇಶ ಅವರ ಎಡಗಾಲಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಹಿಮ್ಮಡಿಗೂ ಗಾಯವಾಗಿದೆ. ಕಾರು ಗುದ್ದಿದ ರಭಸಕ್ಕೆ ಬೈಕ್ ಸಹ ಜಖಂ ಆಗಿದೆ. ಇಷ್ಟಾದರೂ ಕಾರು ಸವಾರ ತನ್ನ ವಾಹನ ನಿಲ್ಲಿಸಿಲ್ಲ. ಹೀಗಾಗಿ ಕಾರು ಚಾಲಕನ ಹೆಸರು-ವಿಳಾಸವೂ ಗೊತ್ತಾಗಿಲ್ಲ. ಅದಾಗಿಯೂ ಮಾರುತಿ ರ‍್ಟಿಗಾ ಕಾರು ಅದಾಗಿದ್ದು, ಕಾರಿನ ನೊಂದಣಿ ಸಂಖ್ಯೆಯ ಜೊತೆ ವಲಯ ಅರಣ್ಯಾಧಿಕಾರಿ ಗ್ರೀಷ್ಮಾ ಪಟಗಾರ ಪೊಲೀಸ್ ದೂರು ನೀಡಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page