6

ಪುಗ್ಗಿ ಜೊತೆ ಹಾರಿ ಹೋದ ಬಾಲಕನ ಉಸಿರು!

ಹಳಿಯಾಳ: ಪುಗ್ಗಿ ಊದಿಸುವ ಬರದಲ್ಲಿ ಉಸಿರನ್ನು ಒಳಗೆ ತೆಗೆದುಕೊಂಡ ಬಾಲಕನ ಗಂಟಲಿನಲ್ಲಿ ಬಲೂನು ಸಿಲುಕಿದ ಪರಿಣಾಮ ನವೀನ ಬೆಳಗಾಂವ್ಕರ್ (13) ಸಾವು ಕಂಡಿದ್ದಾರೆ.

ಜೋಗಿನಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುವ ನವೀನ ನಾರಾಯಣ ಬೆಳಗಾಂವಕರ (13) ಸೋಮವಾರ ಪುಗ್ಗಿ ಹಿಡಿದು ಆಡುತ್ತಿದ್ದರು. ಪುಗ್ಗಿಗೆ ಗಾಳಿ ತುಂಬಲು ಅದನ್ನು ಬಾಯಿ ಬಳಿ ಹಿಡಿದ ಅವರು ಗಾಳಿ ಹೊರ ಹಾಕುವ ಬದಲು ಒಳ ತೆಗೆದುಕೊಂಡರು. ಪರಿಣಾಮ ಕೈಯಲ್ಲಿದ್ದ ಪುಗ್ಗಿ ಗಂಟಲು ಸೇರಿತು.

ಪರಿಣಾಮ ಉಸಿರಾಡಲು ಸಾಧ್ಯವಾಗದೇ ನವೀನ್ ಒದ್ದಾಡುತ್ತಿದ್ದು, ಇದನ್ನು ನೋಡಿದ ಮನೆಯವರು ಗಂಟಲಿನಲ್ಲಿ ಸಿಲುಕಿದ ಪುಗ್ಗಿ ಹೊರತೆಗೆಯುವ ಪ್ರಯತ್ನ ಮಾಡಿದರು. ಮೂಗಿನಿಂದ ಆಗದಿದ್ದರೆ ಬಾಯಿಯಿಂದ ಉಸಿರಾಡುವಂತೆ ಸಲಹೆ ನೀಡಿದರು. ಆದರೆ, ಅದ್ಯಾವುದು ಸಾಧ್ಯವಾಗಲಿಲ್ಲ.

ಉಸಿರುಕಟ್ಟಿ ಒದ್ದಾಡುತ್ತಿದ್ದ ನವೀನರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿನ ವೈದ್ಯರು ಪುಗ್ಗಿ ಹೊರತೆಗೆದರು. ಆದರೆ, ನವೀನರನ್ನು ಬದುಕಿಸಿಕೊಳ್ಳಲು ಆಗಲಿಲ್ಲ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page