6

ದುಡಿದು ತಿನ್ನುವವರ ಮೇಲೆ ದುಷ್ಟರ ದಬ್ಬಾಳಿಕೆ!

ಶಿರಸಿ: ಗೂಡಂಗಡಿ ನಡೆಸಿ ಬದುಕು ಕಟ್ಟಿಕೊಂಡವರ ಮೇಲೆ ದುಷ್ಟರು ದಬ್ಬಾಳಿಕೆ ನಡೆಸಿದ್ದಾರೆ. ರಾತ್ರಿ ವೇಳೆ ಗೂಡಂಗಡಿಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಅದನ್ನು ನಂಬಿ ಬದುಕುತ್ತಿದ್ದವರು ಬೀದಿಗೆ ಬಿದ್ದಿದ್ದಾರೆ.

ಭಾನುವಾರ ರಾತ್ರಿಯವರೆಗೂ ಶಿರಸಿಯ ಮಹಾಸತಿ ಸರ್ಕಲ್ ಬಳಿ ಇದ್ದ ಎರಡು ಗೂಡಗಂಡಿಗಳು ಸೋಮವಾರ ಬೆಳಗ್ಗೆ ಅಲ್ಲಿರಲಿಲ್ಲ. ಮಾಲ್ಕಿ ಜಾಗದಲ್ಲಿದ್ದ ಅಂಗಡಿಗಳನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ. ದ್ವೇಷದ ಹಿನ್ನಲೆ ಈ ಕೆಲಸ ಮಾಡಿದ ಅನುಮಾನಗಳಿವೆ.

ರಸ್ತೆ ಪಕ್ಕದಲ್ಲಿದ್ದ ಈ ಗೂಂಡ0ಗಡಿಯನ್ನು ಬೇರೆಡೆ ಸ್ಥಳಾಂತರಿಸುವ0ತೆ ನಗರಸಭೆಯವರು ಸೂಚಿಸಿದ್ದರು. ಈ ಹಿನ್ನಲೆ ಅಂಗಡಿ ಮಾಲಕರು ತಮ್ಮ ಗೂಡಂಗಡಿಯನ್ನು ಮಾಲ್ಕಿ ಜಾಗಕ್ಕೆ ಕೊಂಡೊಯ್ದಿದ್ದರು. ಆದರೆ, ರಸ್ತೆ ಪಕ್ಕದ ಜಾಗವನ್ನು ಗೂಡಂಗಡಿ ಮಾಲಕರೇ ಸ್ವಚ್ಛ ಮಾಡಿದ್ದರು.

ಅದಾಗಿಯೂ ಅವರನ್ನು ಸಹಿಸದ ಕಿಡಿಗೇಡಿಗಳು ಅಂಗಡಿಯನ್ನು ಧ್ವಂಸ ಮಾಡಿ, ಅಲ್ಲಿದ್ದ ಸಾಮಗ್ರಿಗಳನ್ನು ರಸ್ತೆಗೆ ತಂದಿದ್ದಾರೆ. ಅಂಗಡಿ ಒಳಗೆ ದರೋಡೆ ನಡೆದ ಅನುಮಾನಗಳು ವ್ಯಕ್ತವಾಗಿದೆ.

  • Related Posts

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page