6

ಹುಲ್ಲು ತರಲು ಹೊಲಕ್ಕೆ ಹೋದ ಕೃಷ್ಣನಿಗೆ ಜಲ ಕಂಟಕ!

ಸಿದ್ದಾಪುರ: ಜಾನುವಾರುಗಳ ಮೇವಿಗೆ ಹುಲ್ಲು ತರುವುದಕ್ಕಾಗಿ ಹೊಲಕ್ಕೆ ಹೋಗಿದ್ದ ಕೋಲಸಿರ್ಸಿ ಕೃಷ್ಣ ಕರಿಯಾ ನಾಯ್ಕ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ.

ಭಾನುವಾರ ಅವರು ಕೃಷಿ ಕೆಲಸ ಹಾಗೂ ಹುಲ್ಲು ತರಲು ಗದ್ದೆಗೆ ಹೋಗಿದ್ದರು. ರಾತ್ರಿ ಆದರೂ ಮನೆಗೆ ಮರಳದ ಕಾರಣ ಅವರ ಪತ್ನಿ ಶಾರದಾ ನಾಯ್ಕ ಹುಡುಕಾಟ ಶುರು ಮಾಡಿದರು. ಪಕ್ಕದಮನೆ ಶ್ಯಾಮಲಾ ನಾಯ್ಕ ಅವರ ಜೊತೆಗೂಡಿ ಹೊಲದ ಕಡೆ ಹೆಜ್ಜೆ ಹಾಕಿದ ಆ ಇಬ್ಬರಿಗೂ ಕೃಷ್ಣ ಅವರು ಕೊಂಡೊಯ್ದಿದ್ದ ಕತ್ತಿ ಹಾಗೂ ಹಗ್ಗ ಕಾಣಿಸಿತು.

ಅಲ್ಲೇ ಸ್ವಲ್ಪ ಮುಂದೆ ಕೃಷ್ಣ ನಾಯ್ಕ ತಲೆ ಕೆಳಗಾಗಿ ನೀರಿನಲ್ಲಿ ಮುಖ ಮುಳುಗಿಸಿ ಮಲಗಿದ್ದರು. ಅವರನ್ನು ಎಬ್ಬಿಸುವ ಪ್ರಯತ್ನ ನಡೆಸಿದರು ಪ್ರಯೋಜನವಾಗಲಿಲ್ಲ. ಹೀಗಾಗಿ 108 ಆಂಬುಲೆನ್ಸಿಗೆ ಕರೆ ಮಾಡಿದರು. ಸ್ಥಳಕ್ಕೆ ಬಂದ ಆಂಬುಲೆನ್ಸಿನವರು ಪರೀಕ್ಷಿಸಿ, ಕೃಷ್ಣ ಅವರು ಸಾವನಪ್ಪಿದ ಬಗ್ಗೆ ಘೋಷಿಸಿದರು.

ಕೃಷ್ಣ ಕರಿಯಾ ನಾಯ್ಕ (64) ಕಾಲು ಜಾರಿ ಬಿದ್ದು ಸಾವನಪ್ಪಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.

  • Related Posts

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page