6

ಗಾಂಜಾ ವ್ಯಾಪಾರ | ಅಂಬಿಕಾನಗರದಿoದ ಯಲ್ಲಾಪುರಕ್ಕೆ ಬಂದವ ದುಡಿದಿದ್ದು 300ರೂ!

ಯಲ್ಲಾಪುರ: ಬೊಮಡಿಕೊಪ್ಪ ಕ್ರಾಸಿನ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜೋಸೆಪ್ ಸಿದ್ದಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಹಳಿಯಾಳದ ಅಂಬಿಕಾನಗರದ ಜೋಸೆಪ್ ಫ್ರಾನ್ಸೀಸ್ ಸಿದ್ದಿ ಯಲ್ಲಾಪುರಕ್ಕೆ ಆಗಮಿಸಿ ಗಾಂಜಾ ವ್ಯಾಪಾರ ನಡೆಸುತ್ತಿದ್ದ. ಸೋಮವಾರ ಬೊಮ್ಮಡ್ಡಿಕೊಪ್ಪ ಕ್ರಾಸಿನಲ್ಲಿ ನಿಂತು ಗಾಂಜಾ ಮಾರಾಟದಿಂದಲೇ 300 ರೂಪಾಯಿ ದುಡಿದಿದ್ದ. ಉಳಿದ 249.4 ಗ್ರಾಂ ಗಾಂಜಾ ಮಾರಾಟಕ್ಕಾಗಿ ಆತ ಅಲ್ಲಿಯೇ ಗಿರಾಕಿ ಹುಡುಕುತ್ತಿದ್ದ.

ಯಲ್ಲಾಪುರ ಪಿಎಸ್‌ಐ ಶೇಡಜಿ ಚೌಹಾಣ ಅವರಿಗೆ ಈ ವಿಷಯ ಗೊತ್ತಾಯಿತು. ಸಿಪಿಐ ರಮೇಶ ಹಾನಾಪುರ ಅವರಿಗೆ ಸುದ್ದಿ ಮುಟ್ಟಿಸಿ ಅಧೀನ ಪೊಲೀಸ್ ಸಿಬ್ಬಂದಿ ಜೊತೆ ಅಲ್ಲಿಗೆ ತೆರಳಿದರು. ಆಗಲೂ ಜೋಸೆಪ್ ಅಲ್ಲಿಯೇ ಅಲೆದಾಡುತ್ತಿದ್ದ.

ಪೊಲೀಸ್ ಸಿಬ್ಬಂದಿ ಬಸವರಾಜ ಹಗೇರಿ, ರೇಣುಕಾ ಬೆಳಗಟ್ಟಿ, ಮಹಾವೀರ ಎಸ್, ರಾಘವೇಂದ್ರ ಪಟಗಾರ, ಮಹೇಶ ಹತ್ತಳ್ಳಿ, ಕೃಷ್ಣಾ ಮಾತ್ರೋಜಿ ಹಾಗೂ ಗಂಗಾರಾಮ ಸೇರಿ ಆತನನ್ನು ವಶಕ್ಕೆ ಪಡೆದರು. ಗಾಂಜಾ ಮಾರಾಟದಿಂದ ಆತ ಗಳಿಸಿದ್ದ 300ರೂ ಹಣದ ಜೊತೆ 249.4 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದರು.
ಇದಾದ ನಂತರ ಜೋಸೆಪ್ ಸಿದ್ದಿಯನ್ನು ಜೈಲಿಗೆ ಕಳುಹಿಸಿದರು.

ಮಾದಕ ವ್ಯಸನ ಜೀವಕ್ಕೆ ಮಾರಕ

  • Related Posts

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page