6

ಪೊಲೀಸ್ ಹನುಮಂತನ ಬಳಿ ಸಿಕ್ಕಿಬಿದ್ದ ಕಟುಕ ಮಂಜುನಾಥ: ಎಮ್ಮೆ ಕರುವಿನ ಜೀವ ರಕ್ಷಣೆ!

ಮುಂಡಗೋಡ: ವಧೆ ಮಾಡುವ ಉದ್ದೇಶದಿಂದ ಎಮ್ಮೆ ಕರುಗಳನ್ನು ಸಾಗಿಸುತ್ತಿದ್ದ ಮಂಜುನಾಥ ಬಾಡದ್ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ಕಲಘಟಗಿಯ ಮಂಜುನಾಥ ಭೀಮಪ್ಪ ಬಾಡದ ಟಾಟಾ ಎಸ್ ವಾಹನದಲ್ಲಿ ನಾಲ್ಕು ಎಮ್ಮೆ ಕರುಗಳನ್ನು ತುಂಬಿದ್ದ. ಅವುಗಳಿಗೆ ಅಲ್ಲಿ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಹುಲ್ಲನ್ನು ಹಾಕಿರಲಿಲ್ಲ. ವಾಹನಕ್ಕೆ ತಾಟಪತ್ರೆ ಮುಚ್ಚಿ ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಅವನ್ನು ಸಾಗಿಸುತ್ತಿದ್ದ.

ಪಿಎಸ್‌ಐ ಹನುಮಂತ ಕುಡಗುಂಡಿ ಆ ವಾಹನ ತಪಾಸಣೆ ನಡೆಸಿದರು. ಜಾನುವಾರು ಸಾಗಾಟಕ್ಕೆ ಪಡೆದ ಅನುಮತಿ ಬಗ್ಗೆ ಪ್ರಶ್ನಿಸಿದರು. ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದದನ್ನು ಗಮನಿಸಿ ಎಮ್ಮೆ ಕರುಗಳನ್ನು ಅಲ್ಲಿಂದ ಬಿಡುಗಡೆ ಮಾಡಿದರು. ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿಕೊಂಡರು. ಪೊಲೀಸ್ ಸಿಬ್ಬಂದಿ ರಾಜೇಶ್ ನಾಯ್ಕ ತನಿಖೆ ನಡೆಸುತ್ತಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page