6

ಕಾಸು ಕೊಟ್ಟರೂ ಮುಂದೆ ಚಲಿಸದ ಬೆಂಗಳೂರು ಬಸ್ಸು!

ಶಿರಸಿ: ಶಿರಸಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಟಯರ್ ಸ್ಪೋಟವಾಗಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಬುಧವಾರ ಬೆಳಗ್ಗೆ 8.30ಕ್ಕೆ ಶಿರಸಿಯಿಂದ ಬೆಂಗಳೂರಿಗೆ ಬಸ್ಸು ಹೊರಟಿತು. ಸಿದ್ದಾಪುರ, ಸಾಗರ, ಕಡೂರು, ಶಿವಮೊಗ್ಗ ಸೇರಿ ನಾನಾ ಭಾಗಗಳಿಗೆ ತೆರಳುವ ಪ್ರಯಾಣಿಕರು ಈ ಬಸ್ಸಿನಲ್ಲಿದ್ದರು. ಸಿದ್ದಾಪುರ ತಾಲೂಕಿನ ಕಾನಸೂರಿನ ಬಳಿ ಬಸ್ಸಿನ ಹಿಂದಿನ ಟಯರ್ ಸ್ಪೋಟವಾಗಿದ್ದು, ಆ ಸದ್ದಿಗೆ ಪ್ರಯಾಣಿಕರು ಕಕ್ಕಾಬಿಕ್ಕಿಯಾದರು.

ಟಯರ್ ಸ್ಪೋಟಗೊಂಡಿದ್ದರಿAದ ಬಸ್ಸು ಸಹ ಎಡಕ್ಕೆ ವಾಲಿದ್ದು, ನಿಯಂತ್ರಣ ತಪ್ಪುವ ಮೊದಲೇ ಬಸ್ಸನ್ನು ಚಾಲಕ ನಿಲ್ಲಿಸಿದರು. ಬಸ್ಸು ರಸ್ತೆ ಪಕ್ಕ ನಿಂತಾಗ ಒಳಗಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಸಮಯಕ್ಕೆ ಸರಿಯಾಗಿ ಊರು ಸೇರಲಾರದೇ ಜನ ತೊಂದರೆ ಅನುಭವಿಸಿದರು. ಈ ಪೈಕಿ ಕೆಲವರು `ಟಿಕೆಟ್ ಹಣ ಮರಳಿಸಿ’ ಎಂದು ಪಟ್ಟು ಹಿಡಿದರು. ಇನ್ನೂ ಕೆಲವರು ಬೇರೆ ವಾಹನದ ಮೂಲಕ ಸಂಚಾರ ನಡೆಸಿದರು.

`ಹೊಸದಾಗಿ ಕಾಣುವ ಬಸ್ಸಿಗೆ ಹಳೆ ಟಯರ್ ಅಳವಡಿಸಿದ ಕಾರಣ ಈ ಸ್ಪೋಟ ನಡೆದಿದೆ’ ಎಂದು ಜನ ದೂರಿದರು. ರಾಜಧಾನಿಗೆ ತೆರಳುವ ಬಸ್ಸಿನ ನಿರ್ವಹಣೆಯನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಅಸಮಧಾನ ವ್ಯಕ್ತಪಡಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page