6

ಗ್ರಾ ಪಂ ಸಿಬ್ಬಂದಿಗೆ ಗುದ್ದಿದ ಅರಣ್ಯ ಗಸ್ತು ಜೀಪು

ಶಿರಸಿ: ಅರಣ್ಯ ಇಲಾಖೆಯ ಜೀಪು ಬೈಕಿಗೆ ಗುದ್ದಿದೆ. ಪರಿಣಾಮ ಬೈಕ್ ಓಡಿಸುತ್ತಿದ್ದ ಗ್ರಾ ಪಂ ಸಿಬ್ಬಂದಿ ಮಂಜುನಾಥ ಮುಕ್ರಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.

ಶಿರಸಿಯ ಝೂ ಸರ್ಕಲ್ ಬಳಿ ಶುಕ್ರವಾರ ಸಂಜೆ ಈ ಅಪಘಾತ ನಡೆದಿದೆ. ರಾಘವೇಂದ್ರ ಮಠ ರಸ್ತೆ ಕಡೆಯಿಂದ ಜೀಪು ಸಂಚರಿಸುತ್ತಿತ್ತು. ಆ ಭಾಗದಲ್ಲಿಯೇ ಬೈಕಿನಲ್ಲಿ ಸಂಚರಿಸುತ್ತಿದ್ದ ಬಾಳೆಗದ್ದೆಯ ಸಾಲ್ಕಣಿ ಗ್ರಾಮ ಪಂಚಾಯತ್ ಸಿಬ್ಬಂದಿ ಮಂಜುನಾಥ್ ಮುಕ್ರಿ ಅವರಿಗೆ ಜೀಪು ಗುದ್ದಿತು.

ಅಪಘಾತದ ರಭಸಕ್ಕೆ ಬೈಕು ಜೀಪಿನ ಅಡಿಗೆ ಬಿದ್ದಿದ್ದು, ಮಂಜುನಾಥ ಮುಕ್ರಿ ಅವರ ಕಾಲಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಅರಣ್ಯ ಇಲಾಖೆಯ ಜೀಪು ವೇಗವಾಗಿ ಬಂದು ಬೈಕಿಗೆ ಗುದ್ದಿತು ಎಂದು ಅಲ್ಲಿ ನೆರೆದಿದ್ದವರು ವಿವರಿಸಿದರು.

ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page