6

ಭೂ ವಿವಾದ | ಅಪ್ಪ ಮಕ್ಕಳ ಮೇಲೆ ಸಹೋದರರ ಆಕ್ರಮಣ!

ಹಳಿಯಾಳ: ಭೂಮಿಯ ಹಕ್ಕು ಹಾಗೂ ಆಸ್ತಿ ಬದಲಾವಣೆ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಕಾಳಗ ನಡೆದಿದೆ.

ಕಾಳಗಿನಕೊಪ್ಪದ ಪವನ ಶಿವನಗೌಡ ಹಾಗೂ ಅವರ ತಂದೆ ರಾಮ ಶಿವನಗೌಡ ಅವರ ಮೇಲೆ ಪರಶುರಾಮ ಶಿವನಗೌಡ, ಸುಭಾಶ ಶಿವನಗೌಡ, ಬಸು ಶಿವನಗೌಡ ಹಾಗೂ ಲಕ್ಷ ಶಿವನಗೌಡ ಎಂಬಾತರು ಆಕ್ರಮಣ ನಡೆಸಿದ್ದಾರೆ.

ಈ ಎರಡು ಕುಟುಂಬದವರ ನಡುವೆ ಭೂಮಿಯ ಹಕ್ಕಿನ ವಿಷಯದಲ್ಲಿ ಮನಸ್ತಾಪ ಎದುರಾಗಿತ್ತು. ಡಿ 4ರ ರಾತ್ರಿ 10.30ಕ್ಕೆ ಪವನ ಅವರ ಮನೆ ಮುಂದೆ ಬಂದ ನಾಲ್ವರು ಆರೋಪಿತರು ಪಾಟಿಕಲ್ಲಿನಿಂದ ಗುದ್ದಿ ಮನೆ ಬಾಗಿಲು ಒಡೆದು ಒಳನುಗ್ಗಿದ್ದಾರೆ.

ನಂತರ ಅಲ್ಲಿದ್ದ ಕಟ್ಟಿಗೆಯಿಂದ ಪವನ ಹಾಗೂ ರಾಮ ಅವರಿಗೆ ಬಡಿದಿದ್ದಾರೆ. ಅಡುಗೆಮನೆಯಲ್ಲಿದ್ದವರನ್ನು ಎಳೆದು ತಂದು ಬಟ್ಟೆ ಹರಿದಿದ್ದಾರೆ. ಅದರಲ್ಲಿ ಒಬ್ಬ ರಾಮ ಅವರ ಎದೆಮೇಲೆ ಕೂತು ರಪ ರಪ ಹೊಡೆದು ಗಾಯಗೊಳಸಿದ ಬಗ್ಗೆಯೂ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page