6

ಸ್ವರ್ಣವಲ್ಲಿ ವರ್ಧಂತಿ ಉತ್ಸವ: ಜನಪ್ರಿಯ ಟ್ರಸ್ಟಿನಿಂದ ಶತರುಧ್ರ ಅಭಿಷೇಕ

ಯಲ್ಲಾಪುರ: ಸೋಂದಾ ಸ್ವರ್ಣವಲ್ಲಿ ಸಂಸ್ಥಾನದಲ್ಲಿನ ವರ್ಧಂತಿ ಉತ್ಸವ ಅಂಗವಾಗಿ ವಿವಿಧ ಕಡೆ ವಿವಿಧ ಬಗೆಯ ಕಾರ್ಯಕ್ರಮಗಳು ನಡೆಯುತ್ತದೆ.
ಕಳೆದ ಒಂದು ದಶಕದಿಂದ ಧಾರ್ಮಿಕ, ಪರಿಸರ, ಸಾಮಾಜಿಕ ವಿಷಯವಾಗಿ ಶ್ರಮಿಸುತ್ತಿರುವ ಜನಪ್ರಿಯ ಟ್ರಸ್ಟ್ ಸಹ ಸ್ವರ್ಣವಲ್ಲಿಯ ಗಂಗಾಧರೇOದ್ರ ಸರಸ್ವತೀ ಸ್ವಾಮೀಜಿಯವರ ಆಶಯದಂತೆ ಧಾರ್ಮಿಕ ಶೃದ್ಧೆ ಪಸರಿಸುವ ಕೆಲಸ ಮಾಡುತ್ತಿದೆ. ಪ್ರಸ್ತುತ ವರ್ಧಂತಿ ಉತ್ಸವ ಅಂಗವಾಗಿ ಹುತ್ಕಂಡದ ಕಂಚನಳ್ಳಿಯಲ್ಲಿ ಜನಪ್ರಿಯ ಟ್ರಸ್ಟ್’ನವರು ಶತರುಧ್ರ ಅಭಿಷೇಕ ನಡೆಸಿದರು. ಟ್ರಸ್ಟ್ ೧೦ ವರ್ಷ ಪೂರೈಸಿದ ಹಿನ್ನಲೆ ಅನ್ನ ಸಂತರ್ಪಣೆ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆದವು.
೧೧ ವೈದಿಕರು ಶತರುದ್ರ ಪಾರಾಯಣದಲ್ಲಿ ಭಾಗವಹಿಸಿದ್ದು, ವೇ. ಗಣಪತಿ ಭಟ್ ಕೋಲಿಬೇಣ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆದವು. ಗುರು ಪ್ರಾರ್ಥನೆಯಿಂದ ಕಾರ್ಯಕ್ರಮ ಶುರು ಮಾಡಿ, ಮಹಾಭಿಷೇಕ ನಡೆಸಿ ಸಂಪನ್ನಗೊಳಿಸಲಾಯಿತು. ಜನಪ್ರಿಯ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಮಹೇಶ್ ಭಟ್ ಟ್ರಸ್ಟ್ ನಡೆದುಬಂದ ದಾರಿಯ ಬಗ್ಗೆ ವಿವರಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    Leave a Reply

    Your email address will not be published. Required fields are marked *

    You cannot copy content of this page