6

ಊಟಕ್ಕೆ ಹೋಗಿ ಒದೆ ತಿಂದ ನೆಂಟ!

ಕುಮಟಾ: ಸೋದರ ಮಾವನ ಜೊತೆ ಸಂಬoಧಿಕರ ಮನೆಗೆ ಊಟಕ್ಕೆ ಹೋಗಿದ್ದ ಸಜ್ಜಾದ ಯೂಸೂಪ್ ಬೇಗ್ ಎಂಬಾತರಿಗೆ ಐವರು ಸೇರಿ ಥಳಿಸಿದ್ದಾರೆ.

ಕುಮಟಾ ಹಳಕಾರಿನ ಸಜ್ಜಾದ ಯೂಸೂಪ್ ಬೇಗ್ ಚಾಲಕರಾಗಿ ಜೀವನ ನಡೆಸುತ್ತಿದ್ದಾರೆ. ನ 11ರಂದು ಅವರು ತಮ್ಮ ಸೋದರ ಮಾವನ ಜೊತೆ ಸಂಬoಧಿಕರ ಮನೆಗೆ ಊಟಕ್ಕೆ ಹೋಗಿದ್ದರು. ಆಗ ಅಲ್ಲಿದ್ದ ಚಂದಾವರದ ಐದು ಜನ ಜಗಳಕ್ಕೆ ಬಂದರು.

ಹಳೆಯ ವಿಷಯವೊಂದನ್ನು ಪ್ರಸ್ತಾಪಿಸಿದ ಚಂದಾವರದ ಫೈಸಲ್ ಖಾನ್ ಮೊದಲು ಜಗಳ ಶುರು ಮಾಡಿದರು. ನಂತರ ಫೈಸಲ್ ಖಾನ್ ಜೊತೆಗಿದ್ದ ಅಖಲಕ್ ಖಾನ್, ವಸೀಮ್ ಖಾನ್, ಮಾಸೂಮ್ ಹಾಗೂ ಮುಸ್ತಪಾ ಸೇರಿ ಸಜ್ಜಾದ ಯೂಸೂಪ್ ಬೇಗ್ ಅವರನ್ನು ಹಿಡಿದು ದೂಡಾಡಿದರು.

ಈ ಎಳೆದಾಟದಲ್ಲಿ ಸಜ್ಜಾದ ಅವರ ಬಟ್ಟೆ ಹರಿದಿದ್ದು, ಅದೇ ದಿನ ಅವರು ಪೊಲೀಸ್ ದೂರು ನೀಡಿದ್ದರು. ಇದೀಗ ನ್ಯಾಯಾಲಯದ ಅನುಮತಿ ಪಡೆದು ನ ಸಜ್ಜಾದ ಯೂಸೂಪ್ ಬೇಗ್ ಆ ಐವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page