6

ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಬಾಲ್‌ಪೆನ್ ರಾಶಿ!

ಸಿದ್ದಾಪುರ: ಮಟ್ಕಾ ಆಡಿಸುವವರ ಜೂಜಾಟದ ಚಟ ಬಿಡಿಸಲು ಗುದ್ದಾಡುತ್ತಿರುವ ಪೊಲೀಸ್ ನಿರೀಕ್ಷಕ ಜೆ ಬೆ ಸೀತಾರಾಮ ಇದೀಗ ಇನ್ನೊಂದು ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ.

ಹೆಗ್ಗರಣಿ ಸರ್ಕಲ್ ಬಳಿ ಮಟ್ಕಾ ಆಡಿಸುತ್ತಿದ್ದ ವೀರೇಂದ್ರ ಗೌಡ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ, ಅವರು ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದ್ದಾರೆ. ಹೆಗ್ನೂರು ಬಳಿಯ ಅತ್ತಿಸೌಲ್’ನ ವೀರೇಂದ್ರ ಗೌಡ ಡಿ 7ರಂದು ಹೆಗ್ಗರಣಿ ಸರ್ಕಲಿನಲ್ಲಿ ನಿಂತು ಮಟ್ಕಾ ವ್ಯಾಪಾರ ನಡೆಸುತ್ತಿದ್ದಾಗ ಪೊಲೀಸರು ದಾಳಿ ಮಾಡಿದರು.

ಪೊಲೀಸ್ ನಿರೀಕ್ಷಕ ಜೆ ಬೆ ಸೀತಾರಾಮ ಅವರು ವೀರೇಂದ್ರ ಗೌಡರನ್ನು ತಡುಕಾಡಿದಾಗ ಮಟ್ಕಾ ಆಟಕ್ಕೆ ಬಳಸಿದ್ದ ಚೀಟಿ, ಬಾಲ್‌ಪೆನ್ನು ಹಾಗೂ ಜನರಿಂದ ಸಂಗ್ರಹಿಸಿದ್ದ 850ರೂ ಹಣ ಸಿಕ್ಕಿತು. ಅವೆಲ್ಲವನ್ನು ವಶಕ್ಕೆ ಪಡೆದು ವೀರೇಂದ್ರ ಗೌಡರಿಗೆ ಪೊಲೀಸರು ಎಚ್ಚರಿಕೆ ನೀಡಿದರು. ಕಾನೂನುಬಾಹಿರ ಜೂಜಾಟ ನಡೆಸಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page