6

ಮೀನುಗಾರಿಕೆಗೆ ಹೋದ ದೋಣಿ ಹಿಡಿದು ತಂದಿದ್ದು ಕಾರ್ಮಿಕನ ಶವ!

ಭಟ್ಕಳ: ಮೀನುಗಾರಿಕೆ ನಡೆಸಲು ಆಳ ಸಮುದ್ರಕ್ಕೆ ಹೋಗಿದ್ದ ಮಾಸ್ತಿ ಗೊಂಡ ಶವವಾಗಿದ್ದಾರೆ.

ಹೆಬಳೆ ಬಳಿಯ ಸಂಪನಕೇರಿಯ ಒಬ್ಬನಕಲ್’ನ ಮಾಸ್ತಿ ಗೊಂಡ (31) ಡಿ 7ರ ನಸುಕಿನಲ್ಲಿ ಮೀನುಗಾರಿಕೆಗೆ ಹೋಗಿದ್ದರು. `ಸುಶೀಲಾ’ ಎಂಬ ಬೋಟಿನಲ್ಲಿ ಆಳ ಸಮುದ್ರ ತಲುಪಿದ ಅವರು ಕಾಲು ಜಾರಿ ಸಮುದ್ರಕ್ಕೆ ಬಿದ್ದರು. ಕತ್ತಲೆಯಿರುವ ಕಾರಣ ಎಷ್ಟು ಹುಡುಕಿದರೂ ಆ ವೇಳೆ ಅವರು ಸಿಗಲಿಲ್ಲ.

ಸಂಜೆಯವರೆಗೂ ಹುಡುಕಾಟ ನಡೆಸಿದಾಗ 5 ಗಂಟೆ ವೇಳೆಗೆ ಆಳ ಸಮುದ್ರದ ನಡುವೆ ಅವರ ಶವ ತೇಲುತ್ತಿರುವುದು ಕಂಡಿತು. ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನಪ್ಪಿದ ಮೀನುಗಾರರನ್ನು ಇತರೆ ಮೀನುಗಾರ ಕಾರ್ಮಿಕರು ದೋಣಿಯೊಳಗೆ ಹಾಕಿಕೊಂಡು ದಡ ಸೇರಿದರು.

ಹಿರೇಕೆರೆಯಲ್ಲಿ ವಾಸವಾಗಿರುವ ಮಾಧವ ಗೊಂಡ ಅವರು ತನ್ನ ಮಗನ ಸಾವಿನ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿ, ಶವ ಪಡೆದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page