6

ಜ್ವರ ಬಂದವರಿಗೆ ಬೇಡ ಜಂತು ಹುಳುವಿನ ಮಾತ್ರೆ

ಕಾರವಾರ: ಆರೋಗ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ಜಂತು ಹುಳುವಿನ ಮಾತ್ರ ನೀಡಲಾಗುತ್ತಿದೆ. `ಜ್ವರ ಅಥವಾ ದೀರ್ಘ ಕಾಯಿಲೆಯಿಂದ ಬಳಲುತ್ತಿರುವವರು ಈ ಮಾತ್ರೆ ಸೇವಿಸದಿರುವುದು ಒಳಿತು’ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆಯಂತೆ ನಗೆ ಶಾಲೆಯಲ್ಲಿ `ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ’ ಆಚರಿಸಲಾಯಿತು. ಎನ್‌ಡಿಡಿ ಕಾರ್ಯಕ್ರಮದ ಅನ್ವಯ ಮಕ್ಕಳಿಗೆ ಜಂತು ಹುಳು ಮಾತ್ರೆಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಅಖ್ತರ ಜೆ ಸೈಯದ್ ಜಂತು ಹುಳು ನಿವಾರಣಾ ದಿನದ ಮಹತ್ವ ತಿಳಿಸಿದರು. `19 ವರ್ಷದೊಳಗಿನ ಮಕ್ಕಳು ಜಂತು ಹುಳು ಕಾಟದಿಂದ ರಕ್ಷಿಸಿಕೊಳ್ಳಲು ಈ ಮಾತ್ರೆಯ ಪ್ರಯೋಜನ ಪಡೆಯಬೇಕು’ ಎಂದು ಅವರು ಕರೆ ನೀಡಿದರು.

ಸ್ಥಳೀಯ ಆರೋಗ್ಯ ಕಾರ್ಯಕರ್ತೆ ಮಾತನಾಡಿ `ಜ್ವರ ಹಾಗೂ ದೀರ್ಘ ಕಾಯಿಲೆಗಳಿದ್ದಲ್ಲಿ ಈ ಮಾತ್ರೆ ಸೇವಿಸುವುದು ಬೇಡ’ ಎಂಬ ಸಲಹೆ ನೀಡಿದರು. `ಈ ದಿನ ಗೈರಾದ ಮಕ್ಕಳಿಗೆ ಡಿ 16ರಂದು ಮಾತ್ರೆಗಳನ್ನು ನೀಡಲಾಗುತ್ತದೆ’ ಎಂದು ಸಹಶಿಕ್ಷಕಿ ಪ್ರಿಯಾ ಲಾಂಜೇಕರ ತಿಳಿಸಿದರು. ಶಾಲಾ ಅತಿಥಿ ಶಿಕ್ಷಕಿಯರಾದ ರೇಷ್ಮಾ ಹುಲಸ್ವಾರ, ಪ್ರಿಯಾ ಲಾಂಜೇಕರ, ಅಡುಗೆ ಸಿಬ್ಬಂದಿ ಇದ್ದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page