6

ಉತ್ತರಕುಮಾರನ ಮನೆಯಲ್ಲಿ ಕಳ್ಳತನ: ಪ್ರವರಕುಮಾರನಿಂದ ಪೊಲೀಸ್ ದೂರು!

ಕಾರವಾರ: ಮಲ್ಲಾಪುರದಲ್ಲಿರುವ ಕೈಗಾ ಟೌನ್‌ಶಿಪ್’ನಲ್ಲಿ ಕಳ್ಳತನ ನಡೆದಿದೆ. ಸಾಕಷ್ಟು ಭದ್ರತೆಯಿರುವ ಪ್ರದೇಶದೊಳಗೆ ನುಸುಳಿದ ಕಳ್ಳರು ಮನೆ ಬೀಗ ಒಡೆದು ಚಿನ್ನಾಭರಣ ದೋಚಿದ್ದಾರೆ.

ಕೈಗಾ ಅಣು ಘಟಕದ ಉದ್ಯೋಗಿ ಉತ್ತರಕುಮಾರ ಅವರು ತಮ್ಮ ಊರಾದ ಬಿಹಾರಕ್ಕೆ ಹೋಗಿದ್ದರು. ಊರಿಗೆ ಹೋಗುವ ಮುನ್ನ ತಾವು ವಾಸವಾಗಿರುವ `ಡಿ – 29′ ಸಂಖ್ಯೆಯ ಮನೆಗೆ ಬೀಗ ಹಾಕಿದ್ದರು. ಅವರು ಮಲ್ಲಾಪುರದಲ್ಲಿ ಇಲ್ಲ ಎಂಬುದನ್ನು ಅರಿತ ಕಳ್ಳರು ಅವರ ಮನೆಗೆ ನುಗ್ಗಿ 10 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಡಿಸೆಂಬರ್ 9ರ ರಾತ್ರಿ ಪಕ್ಕದ ಮನೆಯಲ್ಲಿರುವ ಕೈಗಾ ಅಣು ಘಟಕದ ಟೆಕ್ನಿಕಲ್ ಆಫಿಸರ್ ಪ್ರವರಕುಮಾರ ಅವರು ಉತ್ತರಕುಮಾರ ಅವರ ಮನೆಗೆ ಬೀಗ ಹಾಕಿದನ್ನು ಗಮನಿಸಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಅವರ ಮನೆ ಬೀಗ ಒಡೆದಿತ್ತು. ಕೂಡಲೇ ಉತ್ತರ ಕುಮಾರ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. `ತಾನು ಟೌನ್‌ಶಿಪ್ಪಿಗೆ ಬರುವುದು ಒಂದು ದಿನ ತಡವಾಗುತ್ತದೆ. ಕಳ್ಳತನ ನಡೆದ ಬಗ್ಗೆ ಪೊಲೀಸರಿಗೆ ತಿಳಿಸಿ’ ಎಂದು ಉತ್ತರಕುಮಾರ ಕೇಳಿಕೊಂಡರು. ಈ ಹಿನ್ನಲೆ ಪಕ್ಕದ ಮನೆಯಲ್ಲಿ ನಡೆದ ಕಳ್ಳತನದ ಬಗ್ಗೆ ಪ್ರವರ ಕುಮಾರ ಪೊಲೀಸ್ ದೂರು ನೀಡಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page