6

ಪೊಲೀಸ್ ದಾಳಿ: ರಾಮನ ಊರಿನಲ್ಲಿ ಮದ್ಯ ತೀರ್ಥ!

ಜೊಯಿಡಾ: ಚಹಾ ಹೊಟೇಲ್’ನಲ್ಲಿ ಸರಾಯಿ ಮಾರುತ್ತಿದ್ದ ಎರಡು ಹೊಟೇಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ರಾಮನಗರದ ರಾಮಲಿಂಗಗಲ್ಲಿಯ ಕಿರಣ ದೇಸಾಯಿ ಹಾಗೂ ನವೀನ ಗಂಗೈಕರ್ ತಮ್ಮ ಹೊಟೇಲಿನಲ್ಲಿ ಸರಾಯಿ ಸೇವನೆಗೆ ಅವಕಾಶ ಕೊಟ್ಟು ಸಿಕ್ಕಿ ಬಿದ್ದಿದ್ದಾರೆ. ಪುಟ್ಟ ಹೊಟೇಲ್ ನಡೆಸುವ ಈ ಇಬ್ಬರೂ ಅಲ್ಲಿ ಬರುವ ಗ್ರಾಹಕರಿಗೆ ಮದ್ಯ ಪೂರೈಸುತ್ತಿದ್ದರು. ಜೊತೆಗೆ ಅಲ್ಲಿಯೇ ಮದ್ಯ ಸೇವನೆಗೆ ಅವಕಾಶ ಕೊಟ್ಟಿದ್ದರು. ಆದರೆ, ಇದಕ್ಕೆ ಅನುಮತಿ ಪಡೆದಿರಲಿಲ್ಲ.

ಈ ವಿಷಯ ಅರಿತ ಪಿಎಸ್‌ಐ ಬಸವರಾಜ ಮಬನೂರು ಹೊಟೇಲ್ ಮೇಲೆ ದಾಳಿ ಮಾಡಿದರು. ವಿವಿಧ ಬಗೆಯ ಮದ್ಯಗಳ ಜೊತೆ ಖಾಲಿ ಗ್ಲಾಸುಗಳನ್ನು ವಶಕ್ಕೆ ಪಡೆದರು. ಚಹಾ ಹೊಟೇಲ್ ಮಾಲಕರ ವಿರುದ್ಧ ಪ್ರಕರಣವನ್ನು ದಾಖಲಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page