6

ಕಟ್ಟಡ ಕಾರ್ಮಿಕನ ಮರಣದಲ್ಲಿ ಅನುಮಾನ | ಔಷಧಿ ಕುಡಿದವ ಅಸ್ವಸ್ಥ: ಗಂಜಿ ಕುಡಿಯುವ ಮುನ್ನವೇ ಸಾವು!

ಯಲ್ಲಾಪುರ: ಮಂಜುನಾಥ ನಗರದ ಅಶೋಕೆ ದೋತ್ರೆ (38) ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ.

ಬುಧವಾರ ಬೆಳಗ್ಗೆ ಮನೆಯಲ್ಲಿದ್ದ ಅವರು ಔಷಧಿ ಸೇವಿಸಿದ್ದರು. ಅದಾದ ನಂತರ ಅಸ್ವಸ್ಥಗೊಂಡ ಅಶೋಕ ದೋತ್ರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಅಲ್ಲಿಂದ ಚೇತರಿಸಿಕೊಂಡ ಅವರು ಮನೆಗೆ ಮರಳಿದ್ದರು.

ಗುರುವಾರ ರಾತ್ರಿ 8 ಗಂಟೆಗೆ `ಕುಡಿಯಲು ಗಂಜಿ ಕೊಡು’ ಎಂದು ಅವರು ಹೇಳಿದ್ದರು. ಗಂಜಿ ಕೊಡುವುದರೊಳಗೆ ಕುಸಿದು ನೆಲಕ್ಕೆ ಬಿದ್ದರು. ಅವರನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಪರೀಕ್ಷಿಸಿದ ವೈದ್ಯರು ಅಶೋಕ ದೋತ್ರೆ ಅವರು ಸಾವನಪ್ಪಿರುವುದಾಗಿ ಹೇಳಿದರು.

ಅಶೋಕ ದೋತ್ರೆ ಅವರ ಶವವನ್ನು ಶವಾಗಾರದಲ್ಲಿರಿಸಲಾಗಿದೆ. `ಅವರ ಸಾವಿನಲ್ಲಿ ಅನುಮಾನವಿದ್ದು, ಈ ಬಗ್ಗೆ ತನಿಖೆ ನಡೆಯಬೇಕು’ ಎಂದು ಶಿರಸಿ ಮಾರುತಿಗಲ್ಲಿಯ ಗೌಂಡಿ ಅಣ್ಣಪ್ಪ ದೋತ್ರೆ ದೂರು ನೀಡಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page