6

ಪೊಲೀಸ್ ಕಣ್ಣಿಗೆ ಸಿಕ್ಕಿಬಿದ್ದ ಸಾದಾ ಸೀದಾ ಮಟ್ಕಾ ಮನುಷ್ಯ!

ಕಾರವಾರ: ಬೈತಖೋಲ್ ಬಳಿ ಮಟ್ಕಾ ಆಡಿಸುತ್ತಿದ್ದ ಮಹೇಶ ಮಾಳಸೇಕರ್ ಮೇಲೆ ಪೊಲೀಸ್ ಉಪ ನಿರೀಕ್ಷಕಿ ಸುಧಾ ಅಘನಾಶಿನಿ ಹಾಗೂ ತಂಡದವರು ದಾಳಿ ನಡೆಸಿದ್ದಾರೆ. ಜೂಜಾಟ ನಡೆಸುವವರ ಮೇಲೆ ನಿರಂತರ ದಾಳಿ ಮುಂದುವರೆಸಿದ ಪೊಲೀಸರು ಸಾಕ್ಷಿಸಹಿತ ಮಹೇಶ ಮಾಳಸೇಕರ್’ರ ಹೆಡೆಮುರಿ ಕಟ್ಟಿದ್ದಾರೆ.

ಕಾರವಾರ ನ್ಯೂ ಕೆಎಚ್‌ಬಿ ಕಾಲೋನಿ ಗಿಂಡಿ ದೇವಸ್ಥಾನದ ಮಹೇಶ ಮಾಳಸೇಕರ್ ಅವರು ಹಳದಿಪುರದ ಪೆಟ್ರೋಲ್ ಬಂಕಿನ ಬಳಿಯ ಅಂಗಡಿಗೆ ಬರುವವರನ್ನು ಮಾತನಾಡಿಸಿ ಮಟ್ಕಾ ಆಟಕ್ಕೆ ಪ್ರೇರೇಪಿಸುತ್ತಿದ್ದರು. `ಅದೃಷ್ಟದ ಆಟ ಆಡಿ’ ಎಂದು ಉತ್ತೇಜಿಸಿ ಹಣ ಪಡೆಯುತ್ತಿದ್ದರು. ಮಟ್ಕಾ ಆಟದ ದೂರಿನ ಹಿನ್ನಲೆ ಪೊಲೀಸರು ಎರಡು ದಿನದಿಂದ ಆತನ ಚಲನ-ವಲನದ ಮೇಲೆ ನಿಗಾ ಇರಿಸಿದ್ದರು.

ಅವರು ಡಿ 13ರ ರಾತ್ರಿ 8 ಗಂಟೆಗೆ ಬೈತಖೋಲ್ ಬಳಿ ಮಟ್ಕಾ ಆಡಿಸುತ್ತಿದ್ದಾಗ ಪೊಲಿಸರು ದಾಳಿ ನಡೆಸಿದರು. ಮಟ್ಕಾ ಚೀಟಿ, ಬಾಲ್‌ಪೆನ್ನಿನ ಜೊತೆ ಜನರಿಂದ ಸಂಗ್ರಹಿಸಿದ್ದ 1930ರೂ ಹಣವನ್ನು ವಶಕ್ಕೆ ಪಡೆದರು. ಕಾನೂನುಬಾಹಿರ ಆಟ ಆಡಿಸುತ್ತಿದ್ದ ಕಾರಣ ಪ್ರಕರಣ ದಾಖಲಿಸಿಕೊಂಡರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page