6

ಜಯ ಕರ್ನಾಟಕ | ವೃಕ್ಷಮಾತೆ ನಿಧನಕ್ಕೆ ಜನಪರ ವೇದಿಕೆ ಸಂತಾಪ

ಕಾರವಾರ: ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರ ನಿಧನಕ್ಕೆ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ ಕಂಬನಿ ಮಿಡಿದಿದ್ದಾರೆ. `ತುಳಸಿ ಗೌಡ ಅವರ ನಿಧನದಿಂದ ಅವರಲ್ಲಿದ್ದ ಅಪಾರ ಪ್ರಮಾಣದ ಅರಣ್ಯ ಜ್ಞಾನವೂ ಅಸುನಿಗಿದೆ. ಇದು ಎಂದಿಗೂ ತುಂಬಲಾಗದ ನಷ್ಟ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.

`ಬಾಲ್ಯದಿಂದಲೂ ಕಾಡಿನಲ್ಲಿ ಬೆಳೆದಿದ್ದ ತುಳಸಿ ಗೌಡ ಅವರು ಕಾಡಿನ ಎಲ್ಲಾ ಗಿಡಗಳ ಬಗ್ಗೆಯೂ ಜ್ಞಾನ ಹೊಂದಿದ್ದರು. ಯಾವ ಗಿಡದ ಎಲೆ ಔಷಧ? ಯಾವ ಬಳ್ಳಿ ವಿಷ? ಎಂಬುದನ್ನು ಕರಾರುವಕ್ಕಾಗಿ ಅವರು ಹೇಳುತ್ತಿದ್ದರು. ಗಿಡ-ಮರಗಳ ಬಗ್ಗೆ ಅತಿ ಹೆಚ್ಚು ಪ್ರೀತಿ ಹೊಂದಿದ್ದ ತುಳಸಿ ಗೌಡ ಅವರು ಅರಣ್ಯ ವಿಶ್ವ ವಿದ್ಯಾಲಯದ ರೀತಿ ಬದುಕಿದ್ದರು. ಪ್ರಸ್ತುತ ಅವರ ನಿಧನದಿಂದ ಜಿಲ್ಲೆಗೆ ಮಾತ್ರವಲ್ಲದೇ, ಇಡೀ ರಾಜ್ಯ-ದೇಶಕ್ಕೂ ದೊಡ್ಡ ನಷ್ಟವಾಗಿದೆ’ ಎಂದು ದಿಲೀಪ ಅರ್ಗೇಕರ್ ಹೇಳಿದ್ದಾರೆ.

`ತುಳಸಿ ಗೌಡ ಅವರು ಪದ್ಮಶ್ರೀ ಪ್ರಶಸ್ತಿ ಪಡೆದು ಹಾಲಕ್ಕಿ ಸಮುದಾಯದ ಹೆಮ್ಮೆ ಹೆಚ್ಚಿಸಿದ್ದರು. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಬಂದಿದ್ದರಿAದ ಉತ್ತರ ಕನ್ನಡ ಜಿಲ್ಲೆಗೂ ಕೀರ್ತಿ ಬಂದಿತ್ತು. ಕನ್ನಡಿಗರಾದ ಅವರು ಪ್ರತಿಷ್ಠಿತ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆದಿರುವುದು ರಾಜ್ಯದ ಹಿರಿಮೆಗೆ ಕಾರಣವಾಗಿತ್ತು. ಪ್ರಸ್ತುತ ಅವರನ್ನು ಕಳೆದುಕೊಂಡಿರುವುದರಿ0ದ ನೋವಾಗಿದೆ. ತುಳಸಿ ಗೌಡರ ಕುಟುಂಬಕ್ಕೆ ದುಖಃ ಮರೆಸುವ ಶಕ್ತಿಯನ್ನು ದೇವರು ದಯಪಾಲಿಸಲಿ’ ಎಂದು ದಿಲೀಪ್ ಅರ್ಗೇಕರ್ ಪ್ರಾರ್ಥಿಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page