6

ಅಡಿಕೆ ವ್ಯಾಪಾರಿಗೆ ನಷ್ಟ: ಒಣಗಿಸಿದ ಅಡಿಕೆ ಕಳ್ಳರ ಪಾಲು!

ಮುಂಡಗೋಡ: ಅಡಿಕೆ ವ್ಯಾಪಾರ ನಡೆಸುವ ಪ್ರಭು ಪಾಟೀಲ್ ಅವರು ಒಣಗಿಸಿದ ಅಡಿಕೆ ಕಳ್ಳರ ಪಾಲಾಗಿದೆ. ಡಿ 21ರ ರಾತ್ರಿ ಈ ಕಳ್ಳತನ ನಡೆದಿದೆ.

ಮುಂಡಗೋಡು ತಾಲೂಕಿನ ಶಿಂಗನಳ್ಳಿ ಗ್ರಾಮದ ಹನುಮಂತ ನಾರ್ವೇಕರ್ ಅವರ ಹೊಲದಲ್ಲಿ ಪ್ರಭು ಪಾಟೀಲ ಅಡಿಕೆ ಒಣಗಿಸಿದ್ದರು. 4 ಲಕ್ಷ ರೂ ಮೌಲ್ಯದ 9 ಕ್ವಿಂಟಾಲ್ ಅಡಿಕೆ ಅಲ್ಲಿದ್ದು, ಎಲ್ಲವನ್ನು ಕಳ್ಳರು ದೋಚಿದ್ದಾರೆ.

ಅಡಿಕೆ ಮರದಿಂದ ಅಡಿಕೆ ಕೊಯ್ಲು ನಡೆಸಿದ್ದ ಪ್ರಭು ಅವರು ಅದರ ಸಂಸ್ಕರಣೆ ನಡೆಸಿ ಒಣಗಿಸಿದ್ದರು. ಅದನ್ನು ಕೆಂಪು ಅಡಿಕೆಯನ್ನಾಗಿ ಪರಿವರ್ತಿಸುವ ಸಿದ್ಧತೆ ನಡೆಸಿದ್ದರು. ಭಾನುವಾರ ಬೆಳಗ್ಗೆ 9 ಗಂಟೆಗೆ ಅಲ್ಲಿ ಹೋಗಿ ನೋಡಿದಾಗ ಒಣಗಿಸಿದ್ದ ಅಡಿಕೆ ಕಾಣಲಿಲ್ಲ.

ಅಡಿಕೆ ಕದ್ದವರನ್ನು ಪತ್ತೆ ಮಾಡುವಂತೆ ಅವರು ಪೊಲೀಸ್ ದೂರು ನೀಡಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page