6

ಅಂತಿ0ಥ ಕಳ್ಳ ಅವನಲ್ಲ.. ಆತನ ಕಿತಾಪತಿ ಒಂದೆರಡಲ್ಲ!

ಹಳಿಯಾಳ: ಶಿವರಾಜ ಹಾಗೂ ಶಿವು ಎಂದು ಕರೆಯಿಸಿಕೊಳ್ಳುತ್ತಿದ್ದ ದೊಡ್ಡ ಕಳ್ಳನನ್ನು ಹಳಿಯಾಳ ಪೊಲೀಸರು ಉಪಾಯವಾಗಿ ಬಂಧಿಸಿದ್ದಾರೆ. ಈತ 78 ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದು, 7 ವರ್ಷಗಳಿಂದ ಪೊಲೀಸರಿಗೆ ಕಾಡಿಸಿ-ಪೀಡಿಸುತ್ತಿದ್ದ. ಬುಧವಾರ ಆತನ ಸುಳಿವು ಆಧರಿಸಿ ದಾಳಿ ನಡೆಸಿದ ಪೊಲೀಸರು ಶಿವರಾಜನನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದರು.

ಕಳ್ಳತನ, ದರೋಡೆ, ಜನರನ್ನು ಬೆದರಿಸುವಿಕೆ ಸೇರಿ ಹಲವು ಬಗೆಯ ಆರೋಪಗಳು ಶಿವರಾಜ ಹಿರೇಮಠ ಮೇಲಿದೆ. 2017ರಲ್ಲಿ ಒಮ್ಮೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಶಿವು ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ, ತನ್ನ ದುಷ್ಕೃತ್ಯವನ್ನು ಆತ ನಿಲ್ಲಿಸಿರಲಿಲ್ಲ. ಆತನನ್ನು ಕೂಡಲೇ ಬಂಧಿಸಿ ಹಾಜರುಪಡಿಸಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು.

ಹೀಗಾಗಿ ಪೊಲೀಸರು ಸಾಕಷ್ಟು ಕಡೆ ಹುಡುಕಾಟ ನಡೆಸಿದ್ದರು. ಆದರೆ, ಆತನ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸುವುದರೊಳಗೆ ಆತ ಅಲ್ಲಿಂದ ಕಣ್ಮರೆಯಾಗುತ್ತಿದ್ದ. ಹಲವು ಬಾರಿ ಈತ ಪೊಲೀಸ್ ದಾಳಿಯಿಂದ ತಪ್ಪಿಸಿಕೊಂಡಿದ್ದು, ಇದೀಗ ಸಿಪಿಆಯ್ ಜಯಪಾಲ ಪಾಟೀಲ ಆತನ ಬಂಧನಕ್ಕೆ ರಣತಂತ್ರ ರೂಪಿಸಿದ್ದರು.

ಪಿಎಸ್‌ಐ ವಿನೋದ ಎಸ್ ಕೆ, ಕೆ ಎನ್ ಅರಕೇರಿ ನೇತ್ರತ್ವದಲ್ಲಿ ಎಎಸ್‌ಐ ಸಂಜು ಅಣ್ಣಿಕೇರಿಯವರನ್ನು ಒಳಗೊಂಡು ತಂಡ ರಚಿಸಿದರು. ಪೊಲೀಸ್ ಸಿಬ್ಬಂದಿ ಭೀಮಣ್ಣ ಕೆ, ನಬೀಸಾಬ ಬೈರವಾಡಗಿ, ಸಂತೋಷ ಲಮಾಣಿ ಹಾಗೂ ರಾಘವೇಂದ್ರ ಕೆರೆವಾಡ ಕಾರ್ಯಾಚರಣೆ ನಡೆಸಿ ಶಿವಯ್ಯ ಹಿರೆಮಠ್’ರನ್ನು ಬಂಧಿಸಿದರು. ಆತನನ್ನು ಇದೀಗ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page