6

ತಲತಲಾಂತರದಿoದ ಬಂದ ವಸ್ತು ಸರ್ಕಾರದ ಪಾಲು: ವನ್ಯಜೀವಿ ಉತ್ಪನ್ನ ಮರಳಿಸಿದ ಜನ

ಶಿರಸಿ: ಹುಲಿ ಉಗುರಿನ ಪ್ರಕರಣದಿಂದ ಜಾಗೃತರಾದ ಉತ್ತರ ಕನ್ನಡ ಜಿಲ್ಲೆಯ 16 ಜನ ತಮ್ಮ ಬಳಿ ಇರುವ ವನ್ಯಜೀವಿ ಉತ್ಪನ್ನಗಳನ್ನು ಅರಣ್ಯ ಇಲಾಖೆಗೆ ಮರಳಿಸಿದ್ದಾರೆ.
ವನ್ಯಜೀವಿಗಳ ಉತ್ಪನ್ನಗಳನ್ನು ಸಾರ್ವಜನಿಕರು ಇಟ್ಟುಕೊಂಡಿದ್ದರೆ ಅದನ್ನು ಮರಳಿಸಲು ಅರಣ್ಯ ಇಲಾಖೆಯು 3 ತಿಂಗಳು ಕಾಲಾವಕಾಶ ನೀಡಿತ್ತು. ಜಿಲ್ಲೆಯ ವಿವಿಧ ಅರಣ್ಯ ಇಲಾಖೆ ಕಚೇರಿಗಳಿಗೆ ಜಿಂಕೆ, ಕಾಡೆಮ್ಮೆಗಳ ಕೊಂಬುಗಳು ಸೇರಿ ಒಟ್ಟು 78 ವಸ್ತುಗಳನ್ನು ಸಂಬoಧಪಟ್ಟ ಅರಣ್ಯ ಇಲಾಖೆಗೆ ನೀಡಿದ್ದು, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಬಿಗ್‌ಬಾಸ್ ಎಂಬ ಟಿವಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ವರ್ತೂರು ಸಂತೋಷ ಎಂಬುವವರು ತಮ್ಮ ಕುತ್ತಿಗೆಗೆ ಹುಲಿ ಉಗುರು ಹಾಕಿದ್ದರು. 2023ರ ಅಕ್ಟೋಬರ್‌ನಲ್ಲಿ ರಾಮನಗರ ಜಿಲ್ಲೆಯ ರಾಮೋನಹಳ್ಳಿ ಅರಣ್ಯಾಧಿಳು ಬಿಗ್‌ಬಾಸ್ ಸೆಟ್‌ಗೆ ನುಗ್ಗಿ ವರ್ತೂರು ಸಂತೋಷ ಅವರನ್ನು ವಶಕ್ಕೆ ಪಡೆದಿದ್ದರು.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವನ್ಯಜೀವಿ ಉತ್ಪನ್ನಗಳನ್ನು ಸಾರ್ವಜನಿಕರು ಇಟ್ಟುಕೊಳ್ಳುವುದು ಅಪರಾಧ ಎಂಬುದು ಅರಣ್ಯಾಧಿಕಾರಿಳ ವಾದವಾಗಿತ್ತು. ಇದಾಗುತ್ತಿದ್ದಂತೆ ಇತರ ಹಲವು ಸೆಲಿಬ್ರಿಟಿಗಳ ಕುತ್ತಿಗೆಯಲ್ಲೂ ಹುಲಿ ಉಗುರು ಇದೆ. ಅವರನ್ನೇಕೆ ಬಿಟ್ಟರು? ಎಂಬ ಪ್ರಶ್ನೆ ಜಾಲತಾಣಗಳಲ್ಲಿ ಎದ್ದಿತ್ತು. ಅದೇ ವಾರ ನಟರಾದ ದರ್ಶನ್, ನಿಖಿಲ್ ಕುಮಾರಸ್ವಾಮಿ, ಜಗ್ಗೇಶ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಮನೆಗಳಿಗೂ ಅರಣ್ಯಾಧಿಕಾರಿಗಳು ನುಗ್ಗಿದ್ದರು. ಇಡೀ ರಾಜ್ಯದಲ್ಲಿ ಈ ದಾಳಿಗಳು ನಡೆದಿದ್ದವು.

  • Related Posts

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    Leave a Reply

    Your email address will not be published. Required fields are marked *

    You cannot copy content of this page