6

ಆಹಾ ಎಂಥ ಋಚಿ | ಸಿಹಿ ಖಾದ್ಯಕ್ಕೆ ಪ್ರೇಮಕ್ಕ.. ಖಾರ ತಿನಿಸಿದ ಜಲಜಕ್ಕ.. ಮರೆತ ಖಾದ್ಯ ನೆನಪಿಸಿದ ಆಶಕ್ಕ!

ಶಿರಸಿ: ಅರಣ್ಯ ವಿದ್ಯಾಲಯ ಆವರಣದಲ್ಲಿ ನಡೆದ ಸಿರಿಧಾನ್ಯ ಅಡುಗೆ ಸ್ಪರ್ಧೆಯಲ್ಲಿ 78 ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದು, ಮೂವರು 5 ಸಾವಿರ ರೂ ಹಣದ ಜೊತೆ ಮೊದಲ ಬಹುಮಾನ ಗೆದ್ದರು. ಸಿಹಿ ಖಾದ್ಯ ವಿಭಾಗದಲ್ಲಿ ಯಲ್ಲಾಪುರ ದೋಣಗಾರಿನ ಪ್ರೇಮಾ ಜೋಶಿ, ಖಾರ ಖಾದ್ಯ ವಿಭಾಗದಲ್ಲಿ ಶಿರಸಿ ಕಾನಗೋಡಿನ ಜಲಜಾಕ್ಷಿ ಹೆಗಡೆ ಹಾಗೂ ಮರೆತು ಹೋದ ಖಾದ್ಯ ವಿಭಾಗದಲ್ಲಿ ಸಿದ್ದಾಪುರ ಗೊದ್ಲಬಳದ ಆಶಾ ಹೆಗಡೆ ಮೊದಲ ಸ್ಥಾನ ಪಡೆದರು.

ಕೃಷಿ ಇಲಾಖೆಯವರು ಈ ಸ್ಪರ್ಧೆ ಆಯೋಜಿಸಿದ್ದು, ಎರಡನೇ ಬಹುಮಾನ ಪಡೆದವರಿಗೆ 3 ಸಾವಿರ ರೂ ಹಾಗೂ 3ನೇ ಬಹುಮಾನ ಪಡೆದವರಿಗೆ 2 ಸಾವಿರ ರೂ ನೀಡಿದೆ. ಸಿಹಿ ಖಾದ್ಯಕ್ಕಾಗಿ ಪ್ರೇಮಾ ಜೋಶಿ ಅವರು ತೊಡದೇವು ಮಾಡಿ ತಂದಿದ್ದರು. ಸಿದ್ದಾಪುರ ತ್ಯಾಗಲಿಯ ರೇಖಾ ಹೆಗಡೆ ಮಾಡಿದ ಮಿಲ್ಕ್ ಶೇಖ್ ಎರಡನೇ ಬಹುಮಾನ ಪಡೆಯಿತು. ಶಿರಸಿ ದೇವತೆಮನೆಯ ಸೀತಾ ಹೆಗಡೆ ಸುಳಿಗಡಬು ಮಾಡಿ ಮೂರನೇ ಬಹುಮಾನ ಪಡೆದರು. ಖಾರ ತಿನಿಸು ವಿಭಾಗದಲ್ಲಿ ಜಲಜಾಕ್ಷಿ ಹೆಗಡೆ ಅವರು ಫಲಾವ್ ಉಣಬಡಿಸಿ 5 ಸಾವಿರ ರೂ ಗೆದ್ದರು. ಕುಸುಮಾ ಹೆಗಡೆ ಅವರು ಸಿರಿಧಾನ್ಯದ ಕರೆ ಮಾಡಿ 3 ಸಾವಿರ ರೂ ಹಾಗೂ ಜೊಯಿಡಾ ಕುಂಬಾರವಾಡದ ಇಂದಿರಾ ಕಾಮತ್ ಉದ್ದಿನ ಕಟ್ಲೆಟ್ ಮಾಡಿ 2 ಸಾವಿರ ರೂ ಜೊತೆ ಮೂರನೇ ಬಹುಮಾನ ಪಡೆದರು.

ಇನ್ನೂ ಮರೆತು ಹೋದ ಖಾದ್ಯ ವಿಭಾಗದಲ್ಲಿ ಆಶಾ ಹೆಗಡೆ ಅಪರೂಪದ ಜಾನ್ ಸಕ್ಕರೆ ಮಾಡಿ ತಂದಿದ್ದರು. ಯಲ್ಲಾಪುರ ಉಮ್ಮಚ್ಗಿಯ ನಯನಾ ಹೆಗಡೆ ಬೆಲ್ಲದ ಚಾಕ್ಲೆಟ್ ಸಿದ್ದಪಡಿಸಿದ್ದರು. ಬನವಾಸಿಯ ಪುಷ್ಪ ಸಣ್ಣಲಿಂಗನವರ್ ಕುಂಬಳಕಾಯಿ ಖಾದ್ಯ ತಯಾರಿಸಿದ್ದರು. ಆಶಾ ಅವರು ಪ್ರಥಮ, ನಯನಾ ಅವರು ದ್ವಿತೀಯ, ಪುಷ್ಪ ಅವರು ಮೂರನೇ ಬಹುಮಾನವನ್ನು ತಮ್ಮದಾಗಿಸಿಕೊಂಡರು.

ಶಾಸಕ ಭೀಮಣ್ಣ ನಾಯ್ಕರ ಜೊತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವ್ಕರ್, ಉಪಕೃಷಿ ನಿರ್ದೇಶಕ ನಟರಾಜ್, ಪ್ರತಿಭಾ ಜಿ ಎಸ್, ಕೆವಿಕೆ ವಿಜ್ಞಾನಿ ರೂಪಾ ಪಾಟೀಲ, ಡಾ ಯಶಸ್ವಿನಿ, ಅರಣ್ಯ ವಿದ್ಯಾಲಯದ ಡಾ ಪ್ರಭುದೇವ ಮೊದಲಾದವರು ಖಾದ್ಯಗಳನ್ನು ಸವಿದು ಖುಷಿಪಟ್ಟರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page