6

ಸ್ಯಾಮಸಂಗ್ | ಮನೆಯಲ್ಲಿದ್ದ ಮೊಬೈಲ್ ಸ್ಪೋಟ!

ಯಲ್ಲಾಪುರ: ನಿತ್ಯ ಬಳಕೆಯಲ್ಲಿದ್ದ ಸ್ಯಾಮಸಂಗ್ ಮೊಬೈಲ್ ಏಕಾಏಕಿ ಸ್ಪೋಟವಾಗಿದೆ. ಸ್ಪೊಟದ ಸದ್ದಿಗೆ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ.

ಯಲ್ಲಾಪುರ ತಾಲೂಕಿನ ಹುಬ್ನಳ್ಳಿಯ ನಾಗೇಂದ್ರ ಭಟ್ಟ ಅವರು ಆರು ವರ್ಷದ ಹಿಂದೆ ಸ್ಯಾಮಸಂಗ್ ಕಂಪನಿಯ ಮೊಬೈಲ್ ಖರೀದಿಸಿದ್ದರು. ಈವರೆಗೆ ಮೊಬೈಲಿನಲ್ಲಿ ಯಾವುದೇ ಸಮಸ್ಯೆ ಬಂದಿರಲಿಲ್ಲ. ಯೂಟೂಬ್ ಸೇರಿ ಹಲವು ಆಫ್’ಗಳನ್ನು ಈ ಮೊಬೈಲ್ ಬಳಸುತ್ತಿದ್ದರು. ಮಕ್ಕಳು ಸಹ ಕಾರ್ಟೂನ್ ನೋಡಲು ಈ ಮೊಬೈಲ್ ಬಳಸುತ್ತಿದ್ದರು.

ಬುಧವಾರ ರಾತ್ರಿ ಮನೆಯ ಮೂಲೆಯಲ್ಲಿರುವ ಸೆಲ್ಪ ಮೇಲೆ ನಾಗೇಂದ್ರ ಭಟ್ಟ ಅವರು ಮೊಬೈಲ್ ಇಟ್ಟಿದ್ದರು. ಗುರುವಾರ ಬೆಳಗ್ಗೆ ಫೋನ್ ಮಾಡಲು ತೆರಳುತ್ತಿದ್ದ ವೇಳೆ ಮೊಬೈಲ್ ಸ್ಪೋಟವಾಗಿದೆ. `ಡಂ’ ಎಂಬ ಶಬ್ದ ಕೇಳಿದ್ದರಿಂದ ಎಲ್ಲರೂ ಬೆಚ್ಚಿ ಬಿದ್ದು ಮನೆ ಹೊರಗೆ ಬಂದರು. ಮೊಬೈಲ್ ಸ್ಪರ್ಶಿಸುವ ಮೊದಲೇ ಸ್ಪೋಟವಾಗಿದ್ದರಿಂದ ಯಾರಿಗೂ ಗಾಯವಾಗಿಲ್ಲ.

ಮೊಬೈಲಿನಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಒಮ್ಮೆಲೆ ಆರಿಸಲು ಆಗಲಿಲ್ಲ. ಮೊಬೈಲ್ ಬ್ಯಾಟರಿ ಹೊತ್ತಿ ಉರಿದಿದ್ದು, ಬೆಂಕಿ ಹೊತ್ತಿ ಉರಿಯುತ್ತಿದ್ದ ಮೊಬೈಲನ್ನು ಮನೆಯಿಂದ ಆಚೆ ಹಾಕಿದ್ದು, ನಂತರ ಬೆಂಕಿ ಆರಿಸಿದರು.

ಮೊಬೈಲ್ ಸ್ಪೋಟವಾಗುವ ವೇಳೆ ಗುಡುಗು-ಸಿಡಲು ಇರಲಿಲ್ಲ. ಮೊಬೈಲ್ ಚಾರ್ಚಿಗೆ ಸಹ ಹಾಕಿಕೊಂಡಿರಲಿಲ್ಲ. ಮೊಬೈಲ್ ಬಳಿ ವಿದ್ಯುತ್ ಸಂಪರ್ಕವೂ ಇರಲಿಲ್ಲ. ಬೆಂಕಿಯೂ ಹತ್ತಿರ ಇರಲಿಲ್ಲ. ಅದಾಗಿಯೂ ಏಕಾಏಕಿ ಮೊಬೈಲ್ ಸ್ಪೋಟಗೊಂಡಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page