6

ಕೆಲಸಕ್ಕೆ ಹೊರಟ ಚಾಲಕ ಕಾಲುವೆಗೆ ಬಿದ್ದು ಸಾವು!

ಹೊನ್ನಾವರ: ಬೆಳಗ್ಗೆ 4 ಗಂಟೆಗೆ ಎದ್ದು ಕೆಲಸಕ್ಕೆ ಹೊರಟ ಗಂಗಾಧರ ಅಂಬಿಗ ಕಾಲುವೆಗೆ ಬಿದ್ದು ಸಾವನಪ್ಪಿದ್ದಾರೆ.

ಹೊನ್ನಾವರ ಮಾವಿನಹೊಳೆಯ ಗಂಗಾಧರ ಅಂಬಿಗ (36)ಡಿ 25ರ ನಸುಕಿನಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಬೈಕ್ ಮೇಲೆ ಹೊರಟ ಅವರು ಮಾವಿನಹೊಳೆ ಹೆದ್ದಾರಿಯನ್ನು ತಲುಪಿದ್ದರು. 5 ಗಂಟೆ ವೇಳೆಗೆ ರಸ್ತೆ ಅಂಚಿನಲ್ಲಿ ಅಂಬಿಗರ ಬೈಕ್ ನಿಂತಿದ್ದು, ಅವರು ಅಲ್ಲಿನ ಕಾಲುವೆಯಲ್ಲಿ ಬಿದ್ದಿದ್ದರು.

ಗಂಗಾಧರ ಅಂಬಿಗ ರಸ್ತೆ ಅಂಚಿನಲ್ಲಿ ಬಿದ್ದಿರುವುದನ್ನು ನೋಡಿದ ಜನ ಅವರ ಮನೆಗೆ ವಿಷಯ ಮುಟ್ಟಿಸಿದರು. ಗಂಗಾಧರ ಅವರ ತಾಯಿ ಸಾವಿತ್ರಿ ಅಲ್ಲಿಗೆ ಆಗಮಿಸಿ, ಗಂಗಾಧರ ಅಂಬಿಗರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಕರೆ ತಂದರು. ಪರಿಕ್ಷಿಸಿದ ವೈದ್ಯರು `ಈಗಾಗಲೇ ಗಂಗಾಧರ ಅಂಬಿಗ ಸಾವನಪ್ಪಿದ್ದಾರೆ’ ಎಂದು ಘೋಷಿಸಿದರು.

ಪೊಲೀಸ್ ಪ್ರಕರಣ ದಾಖಲಿಸಿ ಕುಟುಂಬದವರು ಶವ ಪಡೆದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page