6

8 ವರ್ಷದ ನಂತರ.. ಮನೆಗೆ ಮರಳಿದ್ದು ಮೀನುಗಾರನ ಶವ!

ಹೊನ್ನಾವರ: ಕಳೆದ ಎಂಟು ವರ್ಷದಿಂದ ಮನೆಗೆ ಹೋಗದ ಸುರೇಶ ಮೊಗವೀರ ಸಾವಿನ ನಂತರ ಶವವಾಗಿ ಮರಳಿದ್ದಾರೆ.

ಉಡುಪಿಯ ಬೈಂದೂರಿನ ಸುರೇಶ ಮೊಗವೀರ (37) ಮೀನುಗಾರಿಕೆ ಮಾಡಿ ಬದುಕು ಕಟ್ಟಿಕೊಂಡಿದ್ದರು. ಸರಾಯಿ ಸೇವನೆಯ ವ್ಯಸನಕ್ಕೆ ಅಂಟಿಕೊAಡಿದ್ದ ಅವರು 29ನೇ ವಯಸ್ಸಿನಲ್ಲಿ ಮನೆ ಬಿಟ್ಟಿದ್ದರು. ಬೇರೆ ಬೇರೆ ಊರುಗಳಲ್ಲಿ ವೃತ್ತಿ ಮಾಡಿ ಬದುಕು ಕಟ್ಟಿಕೊಂಡಿದ್ದರು.

ಡಿ 16ರಂದು ಅನಾರೋಗ್ಯಕ್ಕೆ ಒಳಗಾದ ಸುರೇಶ ಮೊಗವೀರ ಅವರನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ ಅವರು ಡಿ 27ರ ನಸುಕಿನಲ್ಲಿ ಭೂ ಲೋಕದ ಯಾತ್ರೆ ಮುಗಿಸಿದರು.

ಸುರೇಶ ಅವರ ದೊಡ್ಡಪ್ಪನ ಮಗ ಮಹಾದೇವ ಮೊಗೇರ್ ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page