6

ತ್ರಿಬಲ್ ರೈಡ್ | ಬೈಕಿಗೆ ಗುದ್ದಿದ ಬಸ್ಸು: ಇಬ್ಬರ ಸಾವು-ಒಬ್ಬ ಗಂಭೀರ

ಯಲ್ಲಾಪುರ: ಬೈಕಿಗೆ ಬಸ್ಸು ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದು, ಒಬ್ಬರ ಕೈ-ಕಾಲುಗಳಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಹೆಲ್ಮೆಟ್ ಸಹ ಧರಿಸದೇ ಬೈಕಿನಲ್ಲಿ ಮೂವರು ಸಂಚರಿಸಿರುವುದು ಹಾಗೂ ಬಸ್ಸು ಚಾಲಕನ ದುಡುಕುತನ ಈ ಅಪಘಾತಕ್ಕೆ ಕಾರಣ.

ಡಿ 28ರ ರಾತ್ರಿ 9.30ಕ್ಕೆ ಯಲ್ಲಾಪುರದ ಬಿಸಗೋಡು ಕ್ರಾಸಿನ ಬಳಿ ಬೈಕ್ ಹಾಗೂ ಬಸ್ಸಿನ ನಡುವೆ ಡಿಕ್ಕಿಯಾಗಿದೆ. ಬೈಕಿಗೆ ಬಸ್ಸು ಗುದ್ದಿದ ರಭಸಕ್ಕೆ ಬೈಕಿನಲ್ಲಿ ಸಂಚರಿಸುತ್ತಿದ್ದ 6ನೇ ತರಗತಿ ಬಾಲಕನ ತಲೆ ಒಡೆದಿದೆ. ಮಹಿಳೆಯೊಬ್ಬರ ಮೆದುಳು ತಲೆಯಿಂದ ಹೊರ ಬಂದು ಅವರು ಸಾವನಪ್ಪಿದ್ದಾರೆ. ಯಲ್ಲಾಪುರದ ಉದ್ಯಮನಗರದ ಕಸ್ತೂರಿ ಬ್ಯಾಡಗಿ (45) ಹಾಗೂ ಕೋಮಲ ಬೋವಿವಡ್ಡರ್ (12) ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.

ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆ ವೇಗವಾಗಿ ಬಸ್ಸು ಓಡಿಸುತ್ತಿದ್ದ ಸಂಗಯ್ಯ ದೊಡ್ಡವಾಡ ಬಸ್ಸು ಬೈಕಿಗೆ ಗುದ್ದಿದ ನಂತರವೂ ತಮ್ಮ ವಾಹನ ಚಲಿಸಿದ್ದಾರೆ. ಹೀಗಾಗಿ ಅಪಘಾತದಿಂದ ಹೆದ್ದಾರಿ ಮೇಲೆ ಬಿದ್ದಿದ್ದ ಕಸ್ತೂರಿ ಹಾಗೂ ಕೋಮಲ್ ಮೇಲೆ ಬಸ್ಸಿನ ಹಿಂದಿನ ಚಕ್ರ ಹತ್ತಿದೆ. ಬೈಕ್ ಓಡಿಸುತ್ತಿದ್ದ ಬಿಸಗೋಡು ಕ್ರಾಸಿನ ಬಸವರಾಜ ಬ್ಯಾಡಗಿ ಅವರಿಗೂ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಬಸವರಾಜ ಬ್ಯಾಡಗಿ ಅವರ ಕೈ – ಕಾಲುಗಳಿಗೆ ಗಾಯವಾಗಿದೆ.

ಅಪಘಾತದ ವಿಷಯ ತಿಳಿದ ತಕ್ಷಣ ಯಲ್ಲಾಪುರ ಪೊಲೀಸ್ ಠಾಣೆಯ ಪಿಐ ರಮೇಶ ಹಾನಾಪುರ ಸ್ಥಳಕ್ಕೆ ದೌಡಾಯಿಸಿದರು. ಪಿಎಸ್‌ಐ ಸಿದ್ದಪ್ಪ ಗುಡಿ, ನಸ್ರೀನ್‌ತಾಜ್ ಚಟ್ಟರಗಿ, ಶೇಡ್ ಜಿ ಚೌಹಾಣ್ ಸೇರಿ ಟ್ರಾಫಿಕ್ ಸಮಸ್ಯೆ ಆಗದಂತೆ ಮುನ್ನಚ್ಚರಿಕೆವಹಿಸಿದರು. ಶಿರಸಿ ಡಿವೈಎಸ್‌ಪಿ ಗಣೇಶ ಕೆ ಎಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಬೇಡ್ಕರ ನಗರದಲ್ಲಿ ಸೆಂಟ್ರಿAಗ್ ಕೆಲಸ ಮಾಡುವ ರೇವಣಸಿದ್ದಪ್ಪ ಉಣಕಲ್ ಪೊಲೀಸ್ ಪ್ರಕರಣ ದಾಖಲಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page