6

ಅಂಕೋಲಾ ಬಸ್ ನಿಲ್ದಾಣದಲ್ಲಿ ಬೈಕ್ ಕದಿಯುವುದು ದೇವಸ್ಥಾನದಲ್ಲಿ ಚಪ್ಪಲಿ ಕದಿಯುವುದಕ್ಕಿಂತ ಸಲೀಸು!

ಅಂಕೋಲಾ: ಅಲ್ಲಿ ಇಲ್ಲಿ ತಡಕಾಡಿ 18 ಸಾವಿರ ರೂ ಒಟ್ಟು ಮಾಡಿದ್ದ ಅಲಗೇರಿಯ ಅಕ್ಷಯ್ ಆಚಾರಿ (21) ಒಂದು ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ್ದ. ನಿತ್ಯ ಅದೇ ಬೈಕಿನಲ್ಲಿ ಆತ ಕಾಲೇಜಿಗೆ ಹೋಗುತ್ತಿದ್ದ. ಆದರೆ, ಆ ಬೈಕನ್ನು ಇದೀಗ ಕಳ್ಳರು ಅಪಹರಿಸಿದ್ದಾರೆ.
ಜೂ 15ರಂದು ಬೆಳಗ್ಗೆ 7 ಗಂಟೆಗೆ ಅಂಕೋಲಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಅಧಿಕೃತ `ವಾಹನ ನಿಲ್ದಾಣ’ ಸ್ಥಳದಲ್ಲಿ ಅಕ್ಷಯ್ ಬೈಕ್ ನಿಲ್ಲಿಸಿದ್ದ. ಮಧ್ಯಾಹ್ನ 2 ಗಂಟೆಗೆ ಆತ ಅಲ್ಲಿಗೆ ಆಗಮಿಸಿದಾಗ ಬೈಕ್ ಅಲ್ಲಿರಲಿಲ್ಲ. ಅವರಿವರಲ್ಲಿ ಪ್ರಶ್ನಿಸಿದಾಗ `ಬೈಕನ್ನು ಜೊತೆಗೆ ತೆಗೆದುಕೊಂಡು ಹೋಗಬೇಕಿತ್ತು’ ಎಂಬ ಉತ್ತರ ಬಂದಿತ್ತು. `ಹೋಗುವಲೆಲ್ಲ ಅದನ್ನು ಕೊರಳಿಗೆ ಕಟ್ಟಿಕೊಂಡು ಹೋಗಲಾಗುವುದಿಲ್ಲ’ ಎನ್ನುವ ಆತ, ಅಷ್ಟು ಜನ ಓಡಾಡುವ ಬಸ್ ನಿಲ್ದಾಣದಂಥ ಪ್ರದೇಶದಲ್ಲಿ, ಅದೂ ಹಗಲಿನ ಹೊತ್ತಿನಲ್ಲಿಯೇ ಬೈಕ್ ನಾಪತ್ತೆ ಆಗಿರುವುದಕ್ಕೆ ಅಚ್ಚರಿಗೆ ಒಳಗಾಗಿದ್ದಾನೆ. `ಬೈಕ್ ಹುಡುಕಿಕೊಡಿ’ ಎಂದು ಪೊಲೀಸರಿಗೆ ದೂರು ನೀಡಿದ್ದು, ಸಿಸಿ ಟಿವಿ ನೋಡಾದರೂ ಪೊಲೀಸರು ತನ್ನ ಬೈಕ್ ಹುಡುಕಿ ಕೊಡುತ್ತಾರೆ ಎಂಬ ನಂಬಿಕೆ ಆತನದ್ದು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page