6

ಸರಾಯಿ ಮಾರಿ ಸಿಕ್ಕಿ ಬಿದ್ದ ಕಳ್ಳ ಕೃಷ್ಣ!

ಮನೆ ಮುಂದೆ ಸರಾಯಿ ಮಾರುತ್ತಿದ್ದ ವಂದಾನೆಯ ಕೃಷ್ಣ ನಾಯ್ಕ ಹಾಗೂ ಪಾನ್ ಬೀಡಾ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಕವಂಚೂರಿನ ಕೃಷ್ಣ ನಾಯ್ಕ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇದರೊಂದಿಗೆ ಸರಾಯಿ ವ್ಯಾಪಾರದಲ್ಲಿ ತೊಡಗಿದ್ದ ಕಾನಗೋಡಿನ ಹಳ್ಳಿಬೈಲ್ ಆನಂದ ನಾಯ್ಕ ಸಹ ಸಿಕ್ಕಿ ಬಿದ್ದಿದ್ದಾರೆ.

ಸಿದ್ದಾಪುರದ ಪೊಲೀಸ್ ನಿರೀಕ್ಷಕ ಜೆಬಿ ಸೀತಾರಾಮ ಅವರು ಜನವರಿ 16ರಂದು ಅಂಗಡಿ ಮುಂದೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಕವಂಚೂರಿನ ಕೃಷ್ಣ ನಾಯ್ಕ ಮೇಲೆ ದಾಳಿ ನಡೆಸಿದರು. ಪೊಲೀಸ್ ಉಪನಿರೀಕ್ಷಕ ಅನೀಲ ಮಾದರ್ ಅವರು ಕವಂಚೂರಿನ ಪಾನ್ ಶಾಪ್ ಕೃಷ್ಣ ನಾಯ್ಕ ಅಂಗಡಿ ಮೇಲೆ ದಾಳಿ ಮಾಡಿದರು. ತನಿಖಾ ವಿಭಾಗದ ಪಿಎಸ್‌ಐ ಗೀತಾ ಶಿರ್ಶಿಕರ್ ಅವರು ವಂದಾನೆಯ ಕೃಷ್ಣ ನಾಯ್ಕ ಬೇಗಾರ್ ಕ್ರಾಸಿನ ಮನೆ ಮುಂದೆ ಮದ್ಯ ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿದರು.

ಈ ಮುರೂ ದಾಳಿಯಲ್ಲಿಯೂ ಅಕ್ರಮ ಮದ್ಯ ಮಾರಾಟಗಾರರು ಸಿಕ್ಕಿ ಬಿದ್ದಿದ್ದು, ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಮದ್ಯ ಮಾರಾಟದ ವೇಳೆ ಸಿಕ್ಕಿ ಬಿದ್ದ ಖಾಲಿ ಲೋಟ, ಮದ್ಯದ ಪ್ಯಾಕೆಟ್’ನ್ನು ಸಾಕ್ಷಿಗಾಗಿ ವಶಕ್ಕೆ ಪಡೆದರು. ಅಕ್ರಮ ಮದ್ಯ ಮಾರಾಟದಿಂದ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಅರಿವು ಮೂಡಿಸಿದರು.

 

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    You cannot copy content of this page