6

ಸಿಗರೇಟಿನ ಸಿಸದಲ್ಲಿ ಗಾಂಜಾ ಅಮಲು: ಸಿಕ್ಕಿಬಿದ್ದ ರಾಪ್ಟಿಂಗ್ ಗೈಡ್!

ಸಿಗರೇಟಿನ ಸೀಸದಲ್ಲಿ ಗಾಂಜಾ ತುಂಬಿ ಸೇವಿಸುತ್ತಿದ್ದ ರಾಪ್ಟಿಂಗ್ ಗೈಡ್ ಸಿಕ್ಕಿ ಬಿದ್ದಿದ್ದು, ಪೊಲೀಸರು ಆತನ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ.

ದಾಂಡೇಲಿಯ ಗಾಂಧಿನಗರದ ಆಸಿಫ್ ಅಬ್ದುಲ್ ರಜಾಕ್ ವಾಗೀನಗೇರಿ (23) ಎಂಬಾತ ಗೋಲ್ಡ್ ಪ್ಯಾಕ್ ಕಂಪನಿಯ ಸಿಗರೇಟು ಖರೀದಿಸಿದ್ದ. ಸಿಗರೇಟು ಒಳಗಿದ್ದ ತಂಬಾಕು ಹೊರತೆಗೆದು ಅದರೊಳಗೆ ಗಾಂಜಾ ತುಂಬಿ ಸೇವಿಸುತ್ತಿದ್ದ.

ಜನವರಿ 17ರ ರಾತ್ರಿ 9.45ರ ಆಸುಪಾಸಿಗೆ ಆತ ಟೌನ್‌ಶಿಫ್ ಗಾರ್ಡನ್ ಸ್ಥಳದಲ್ಲಿ ಅಲೆದಾಡುತ್ತಿದ್ದಾಗ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಆಸಿಫ್ ಕೈಯಲ್ಲಿದ್ದ ಅರ್ದ ಸೇದಿದ ಸಿಗರೇಟನ್ನು ಪೊಲೀಸರು ವಶಕ್ಕೆ ಪಡೆದು, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.

ಆತ ಗಾಂಜಾ ಸೇವಿಸಿರುವುದಾಗಿ ವೈದ್ಯರು ದೃಢೀಕೃತ ವರದಿ ನೀಡಿದರು. ಈ ಹಿನ್ನಲೆ ದಾಂಡೇಲಿ ಪೊಲೀಸ್ ಉಪನಿರೀಕ್ಷಕ ಕಿರಣ ಪಾಟೀಲ ಪ್ರಕರಣ ದಾಖಲಿಸಿದರು.

 

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    You cannot copy content of this page