6

ನಿನ್ನೆ ಪ್ರಶಸ್ತಿ.. ಇಂದು ಪರಲೋಕವಾಸಿ!

ಅಪಘಾತರಹಿತ ಚಾಲನೆ, ಉತ್ತಮ ನಡವಳಿಕೆ ಹಾಗೂ ಸರ್ಕಾರಿ ಸಾರಿಗೆ ಸಂಸ್ಥೆಯ ಆದಾಯ ಹೆಚ್ಚಿಸಿದ ಕಾರಣ ಭಾನುವಾರ ಪ್ರಶಸ್ತಿ ಪಡೆದಿದ್ದ ಎಸ್ ಎನ್ ಶೇಖ್ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ!

ಜಮಖಂಡಿ ಮೂಲದ ಎಸ್ ಎನ್ ಶೇಖ್ ಕಳೆದ 30 ವರ್ಷಗಳಿಂದ ಶಿರಸಿ ಕೆಎಸ್‌ಆರ್‌ಟಿಸಿ ನೌಕರರಾಗಿದ್ದರು. ಜನರ ಜೊತೆ ಉತ್ತಮ ಬಾಂದವ್ಯ ಹೊಂದಿದ್ದ ಅವರು ಸದಾ ನಗುಮುಖದ ಸೇವೆ ನೀಡುತ್ತಿದ್ದರು. ಸೌಮ್ಯ ಸ್ವಭಾವ ಹಾಗೂ ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸುವುದನ್ನು ಅವರು ರೂಢಿಸಿಕೊಂಡಿದ್ದರು.

ಮೊದಲು ಹುಬ್ಬಳ್ಳಿ ಮಾರ್ಗದಲ್ಲಿ ಅವರು ಬಸ್ಸು ಓಡಿಸುತ್ತಿದ್ದರು. ನಂತರ ಶಿರಸಿ-ಬನವಾಸಿ ಮಾರ್ಗದ ಖಾಯಂ ಚಾಲಕರಾಗಿ ನಿಯೋಜನೆಯಾಗಿದ್ದರು. ಇನ್ನೂ ಒಂದುವರೆ ವರ್ಷ ಕಳೆದಿದ್ದರೆ ಅವರು ಸೇವೆಯಿಂದ ನಿವೃತ್ತರಾಗುತ್ತಿದ್ದರು. ಬಸ್ ಚಾಲನೆಯಲ್ಲಿನ ಚಾಣಾಕ್ಷತನದಿಂದ ನಿಗಮದ ಇಂಧನವನ್ನು ಉಳಿಸಿದ್ದರು. ಅವರ ಎಲ್ಲಾ ಸೇವೆ ಗುರುತಿಸಿ ಭಾನುವಾರ ಸಂಜೆ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳನ್ನು ಅವರನ್ನು ಸನ್ಮಾನಿಸಿ, ಗೌರವಿಸಿದ್ದರು.

ಸನ್ಮಾನ ಸ್ವೀಕರಿಸಿದ ಖುಷಿ ಹಂಚಿಕೊAಡಿದ್ದ ಅವರು ಸೋಮವಾರ ಬೆಳಗ್ಗೆ ಅವರು ಹೃದಯಘಾತದಿಂದ ಸಾವನಪ್ಪಿದರು. ನಿನ್ನೆ ಎಲ್ಲರ ಜೊತೆ ಬೆರೆತಿದ್ದ ಎಸ್ ಎನ್ ಶೇಖ್ ಅವರ ದಿಢೀರ್ ಅಗಲುವಿಕೆಯಿಂದ ನಿಗಮದ ನೌಕರರು ಆಘಾತಕ್ಕೆ ಒಳಗಾದರು.

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    You cannot copy content of this page