6

ಹೊಸ ಮನೆ.. ಹೊಸ ಮಳಿಗೆ: ಅದಾಗಿಯೂ ನೆಮ್ಮದಿಯಿಲ್ಲದೇ ಸಾವನಪ್ಪಿದ ಅಕ್ಕಸಾಲಿಗ!

ಹೊಸ ಮನೆ ನಿರ್ಮಾಣ ಸಾಹಸಕ್ಕೆ ಕೈ ಹಾಕಿದ್ದ ಅರುಣ ಶೇಟ್ ಅದೇ ಮನೆ ಮುಂದಿನ ಹೊಸ ಮಳಿಗೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಭಟ್ಕಳ ವಿಟಿ ರೋಡಿನ ಸೋನಾರಕೇರಿಯಲ್ಲಿ ಅರುಣ ಶೇಟ್ ವಾಸವಾಗಿದ್ದರು. ಚಿನ್ನದ ಕೆಲಸ ಮಾಡುತ್ತಿದ್ದ ಅವರು ಅಕ್ಕಸಾಲಿಗ ವೃತ್ತಿಯಿಂದ ಬೆಳೆದಿದ್ದರು. ಈಚೆಗೆ ಹೊಸ ಮನೆ ನಿರ್ಮಾಣದಲ್ಲಿ ತೊಡಗಿದ್ದರು. ಮನೆ ಮುಂದೆ ಹೊಸದಾಗಿ ಮಳಿಗೆಯನ್ನು ಕಟ್ಟಿದ್ದರು.

ಜನವರಿ 19ರಂದು ಬೇಸರದಲ್ಲಿದ್ದ ಅವರು ಹೊಸ ಮನೆ ಮುಂದಿನ ಅಂಗಡಿಗೆ ತೆರಳಿದ್ದರು. ಅಲ್ಲಿಯೇ ಉರುಳು ಹಾಕಿಕೊಂಡರು. ಬಾಗಿಲಿನ ಮೇಲಿನ ಪಟ್ಟಿಗೆ ನೈಲಾನ್ ಹಗ್ಗ ಬಿಗಿದುಕೊಂಡು ನೇತಾಡುತ್ತಿದ್ದ ಅರುಣ ಶೆಟ್ ಅವರನ್ನು ಅವರ ಅಣ್ಣ ವಿನಾಯಕ ಶೇಟ್ ನೋಡಿ ಕೆಳಗಿಳಿಸಿದರು.

ಅಷ್ಟರೊಳಗೆ ಅರುಣ ಶೇಟ್ ಸಾವನಪ್ಪಿದ್ದರು. ಈ ಹಿನ್ನಲೆ ವಿನಾಯಕ ಶೇಟ್ ಪೊಲೀಸ್ ಪ್ರಕರಣ ದಾಖಲಿಸಿ, ಶವ ಪಡೆದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page