6

ಕಾಸಿನ ಆಸೆಗೆ ಹಸು ಕೊಂದ ಪಾಪಿಗಳು: ಮುಗ್ದುಂ ಕಾಲೋನಿಯ ಅವರು ಮುಗ್ದರಲ್ಲ!

ಮಾಂಸ ಮಾರಾಟ ಮಾಡಿ ಕಾಸು ಸಂಪಾದಿಸುವ ಆಸೆಗಾಗಿ ಜಾನುವಾರು ಹತ್ಯೆ ನಡೆಸಿದ ಮೂವರನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಹಸುವಿನ ದೇಹ ತುಂಡರಿಸುತ್ತಿರುವಾಗಲೇ ಪೊಲೀಸರು ದಾಳಿ ನಡೆಸಿದರಾದರೂ ಆ ಹಸುವನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಬುಧವಾರ ಭಟ್ಕಳ ಮುಗ್ದುಂ ಕಾಲೋನಿ ನ್ಯಾಶನಲ್ ಸ್ಟಿಟ್‌ನಲ್ಲಿ ನಿಜಾಮುದ್ದೀನ್ ಮುಕ್ತೇಸರ್ ಎಂಬಾತರು ಗೋ ವಧೆ ಮಾಡಿದ್ದಾರೆ. ಅದಾದ ನಂತರ ಮಹಮದ್ ಇಲಿಯಾಸ ಹಾಗೂ ಖಾಜಾ ಅಬುಲಾಸನ್ ಟೋನ್ಸೆ ಎಂಬಾತರನ್ನು ಕರೆಯಿಸಿ ಹಸುವನ್ನು ತುಂಡು ತುಂಡಾಗಿ ಕತ್ತರಿಸಿದ್ದಾರೆ.

ಈ ವಿಷಯದ ಬಗ್ಗೆ ಖಚಿತ ಮಾಹಿತಿ ಆಧರಿಸಿ ನಿಜಾಮುದ್ದೀನ್ ಮುಕ್ತೇಸರ್ ಮನೆ ಮೇಲೆ ಪೊಲೀಸ್ ಉಪನಿರೀಕ್ಷಕ ಸೋಮರಾಜ ರಾಠೋಡ ದಾಳಿ ಮಾಡಿದರು. ಆಗ ಅಲ್ಲಿ ತುಂಡು ಮಾಡಿದ್ದ ಹಸುವಿನ ರುಂಡ-ಕಾಲುಗಳು ಕಾಣಿಸಿದವು. ಅದರ ಪಕ್ಕದಲ್ಲಿಯೇ ಅಂದಾಜು 100 ಕೆಜಿ ಮಾಂಸವಿದ್ದು, ಅದರ ಸಾಗಾಟ ಪ್ರಕ್ರಿಯೆ ನಡೆದಿತ್ತು.

ತಕ್ಷಣ ಅಲ್ಲಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದರು. ಮಾಂಸ ಮಾರಾಟ ಉದ್ದೇಶದಿಂದ ಜಾನುವಾರು ತುಂಡರಿಸಿದನ್ನು ಖಚಿತಪಡಿಸಿಕೊಂಡು ಮಾಂಸ ತುಂಡರಿಸಲು ಬಳಸಿದ ಸಲಕರಣೆಗಳನ್ನು ವಶಕ್ಕೆ ಪಡೆದರು. ಆ ಮಾಂಸ ಮಾರಿ ದುಷ್ಕರ್ಮಿಗಳು 50 ಸಾವಿರ ರೂ ಹಣ ಸಂಪಾದಿಸಲು ಉದ್ದೇಶಿಸಿದ್ದು, ಅದಕ್ಕೆ ಪೊಲೀಸರು ತಡೆ ಒಡ್ಡಿದರು.

ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ತಿಮ್ಮಪ್ಪ ಎಸ್ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page