6

ಮಾಹಿತಿ ಅಧಿಕಾರಿಗೆ ಇಲ್ಲ ಕಾನೂನು ಜ್ಞಾನ!

ಹಣಕಾಸು ಯೋಜನೆ ಖರ್ಚು ವೆಚ್ಚಗಳಿಗೆ ಸಂಬoಧಿಸಿ ಯಲ್ಲಾಪುರ ತಾಲೂಕಿನ ದೆಹಳ್ಳಿ ಗ್ರಾಮ ಪಂಚಾಯತಗೆ ಸಲ್ಲಿಕೆಯಾದ ಅರ್ಜಿಗಳಿಗೆ ಅಲ್ಲಿನ ಅಧಿಕಾರಿಗಳು ಉತ್ತರಿಸಿಲ್ಲ. ನಿಗದಿತ ಸಮಯದ ಒಳಗೆ ದಾಖಲೆ ಒದಗಿಸುವಂತೆ ಪ್ರಥಮ ಮೇಲ್ಮನವಿ ಪ್ರಾಧಿಕಾರದಿಂದ ಸೂಚನೆ ಬಂದರೂ ಗ್ರಾಮ ಪಂಚಾಯತ ಅಧಿಕಾರಿಗಳು ಅದನ್ನು ನಿರ್ಲಕ್ಷಿಸಿದ್ದಾರೆ.

ದೇಹಳ್ಳಿಯ ಸಾಮಾಜಿಕ ಕಾರ್ಯಕರ್ತ ನಾಗರಾಜ ಭಟ್ಟ ಚಾಪೆತೋಟ ಅವರು ದೆಹಳ್ಳಿ ಗ್ರಾಮ ಪಂಚಾಯತಗೆ ಮಾಹಿತಿ ಹಕ್ಕು ಕಾಯ್ದೆಯ ಅಡಿ ಅರ್ಜಿ ಸಲ್ಲಿಸಿದ್ದಾರೆ. 2024ರ ಸಾಲಿನಲ್ಲಿ ಪರಿಶಿಷ್ಟ ಸಮುದಾಯದ ಕಾಲೋನಿಗೆ ಗ್ರಾಮ ಪಂಚಾಯತದಿAದ ಕುಡಿಯುವ ನೀರು ಪೂರೈಕೆ, ಸೋಲಾರ್ ದೀಪ ಹಾಗೂ ಯುಪಿಎಸ್ ವಿತರಣೆಗೆ ಮಾಡಿದ ವೆಚ್ಚ ಹಾಗೂ ಯೋಜನೆಯ ಅನುಷ್ಠಾನದ ಬಗ್ಗೆ ಅವರು ದಾಖಲಾತಿ ಬಯಸಿದ್ದಾರೆ. ಆದರೆ, ಮೂರು ತಿಂಗಳು ಕಳೆದರೂ ಅಗತ್ಯ ದಾಖಲಾತಿ ಅವರಿಗೆ ಸಿಕ್ಕಿಲ್ಲ!

ಇನ್ನೂ ಅರ್ಜಿದಾರರು ಮೊದಲ ಮೇಲ್ಮನವಿ ಸಲ್ಲಿಸಿದ ನಂತರ ಅವರಿಗೆ ಅಪೂರ್ಣ ಮಾಹಿತಿ ಬಂದಿದೆ. ಆದರೆ, ಅದರಲ್ಲಿ ಮಾಹಿತಿ ಹಕ್ಕು ಅಧಿಕಾರಿಯ ಸಹಿಯೇ ಇಲ್ಲ. ದೃಢೀಕೃತ ಪ್ರತಿಗಳನ್ನು ಸಹ ಒದಗಿಸಿಲ್ಲ. `ಗ್ರಾಮ ಪಂಚಾಯತದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಇದೇ ಕಾರಣದಿಂದ ಮಾಹಿತಿ ಬಚ್ಚಿಡಲಾಗುತ್ತಿದೆ’ ಎಂದು ನಾಗರಾಜ ಭಟ್ಟ ಚಾಪೆತೋಟ ದೂರಿದ್ದಾರೆ. ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುವುದಾಗಿ ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page