6

ಮನೆ ಮಂದಿಯನ್ನು ಕಾಡಿದ ಕಾಡಿನ ಶವ!

15 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಚೇತನ ದೇವಳಿ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಯಲ್ಲಾಪುರ ತಾಲೂಕಿನ ತೆಲಂಗಾರಿನ ಸರಳಗುಡ್ಡೆಯಲ್ಲಿ ಚೇತನ ದೇವಳಿ (29) ತಮ್ಮ ತಂದೆ-ತಾಯಿ ಜೊತೆ ವಾಸಿಸುತ್ತಿದ್ದರು. ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಅವರಿಗೆ ಮದ್ಯ ವ್ಯಸನದ ಚಟ ಅಂಟಿಕೊAಡಿತ್ತು. ಈಚೆಗೆ ವಿಪರೀತ ಪ್ರಮಾಣದಲ್ಲಿ ಅವರು ಸರಾಯಿ ಸೇವಿಸುತ್ತಿದ್ದರು. ಇದೇ ವಿಷಯವಾಗಿ ಮನೆಯಲ್ಲಿ ವಾಗ್ವಾದ ನಡೆದಿತ್ತು.

ಜನವರಿ 8ರಂದು ಮದ್ಯ ಸೇವನೆ ವಿಷಯವಾಗಿ ಚೇತನ ದೇವಳಿ ಮನೆಯಲ್ಲಿ ಜಗಳ ಶುರುವಾಯಿತು. `ಕುಡಿಯಬೇಡ’ ಎಂದು ಅವರ ತಂದೆ-ತಾಯಿ ಬುದ್ದಿ ಹೇಳಿದ್ದರು. ಆಗ, ಪಾಲಕರಿಗೆ ನಿಂದಿಸಿ ಮನೆಬಿಟ್ಟು ಹೋದ ಚೇತನ್ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. 15 ದಿನ ಕಳೆದರೂ ಚೇತನ್ ದೇವಳಿ ಮನೆಗೆ ಮರಳದಿದ್ದಾಗ ಹುಡುಕಾಟ ಶುರುವಾಯಿತು.

ಜನವರಿ 22ರಂದು ತೆಲಂಗಾರಿನ ಸರಳಗುಡ್ಡೆಯ ಗುಡ್ಡೆ ಮೇಲಿನ ಅರಣ್ಯ ಪ್ರದೇಶದಲ್ಲಿ ಚೇತನ ದೇವಳಿ ಶವವಾಗಿದ್ದರು. ಐದಾರು ದಿನಗಳ ಹಿಂದೆಯೇ ಅವರು ಅಲ್ಲಿನ ಹೊನಗಲು ಮರಕ್ಕೆ ನೇಣು ಹಾಕಿಕೊಂಡಿದ್ದರು. ಅವರ ಶವ ಕೊಳೆತ ಸ್ಥಿತಿಯಲ್ಲಿದ್ದು, ಪಾಲಕರು ಬಂದು ಮಗನನ್ನು ಗುರುತಿಸಿದರು.

ತಮ್ಮನ ಸಾವಿನ ಬಗ್ಗೆ ಕಣ್ಣಿಗೇರಿಯ ಚಿಪ್ಪನಗದ್ದೆಯಲ್ಲಿ ವಾಸವಾಗಿರುವ ಭಾರತಿ ಮರಾಠಿ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page