6

ಮಹಿಳೆಯನ್ನು ಬಲಿ ಪಡೆದ ಗಜನಿ ಭೂಮಿ!

ಅಕ್ಕ-ಪಕ್ಕದ ಮನೆಯವರಲ್ಲಿ ಬೇಡಿ ಊಟ ಮಾಡಿಕೊಂಡು ಬದುಕಿದ್ದ ಗೀತಾ ಹರಿಕಂತ್ರ (45) ಅವರು ಗಜನಿ ಭೂಮಿಯ ಆಳಕ್ಕೆ ಸಿಲುಕಿ ಸಾವನಪ್ಪಿದ್ದಾರೆ.

ಅಂಕೋಲಾ ತಾಲೂಕಿನ ಕಣಗಿಲ್ ಗ್ರಾಮದ ಗೀತಾ ಹರಿಕಂತ್ರ ಅವರು ಮಾನಸಿಕ ರೋಗದಿಂದ ಬಳಲುತ್ತಿದ್ದರು. ಅಣ್ಣ ಚಂದ್ರಕಾAತ ಹರಿಕಂತ್ರ ಜೊತೆ ವಾಸವಾಗಿದ್ದ ಅವರು ಅಕ್ಕ-ಪಕ್ಕದ ಮನೆಯವರಲ್ಲಿ ಬೇಡಿ ಊಟ ಮಾಡಿ ಬದುಕುತ್ತಿದ್ದರು.

ಜನವರಿ 22ರಂದು ಸಂಜೆ ಊರಿನಲ್ಲಿ ತಿರುಗಾಟಕ್ಕೆ ಹೊರಟ ಗೀತಾ ಹರಿಕಂತ್ರ ರಾತ್ರಿ ವೇಳೆ ಹಡವ ಗ್ರಾಮದ ಗಜನಿ ಪ್ರದೇಶದ ಬಳಿ ಹೋಗಿದ್ದರು. ಕತ್ತಲಿನಲ್ಲಿ ಅಲ್ಲಿನ ನೀರಿನಲ್ಲಿ ಬಿದ್ದು ಅವರು ಸಾವನಪ್ಪದರು.

ಜನವರಿ 23ರಂದು ಅವರ ಶವ ಸಿಕ್ಕಿದೆ. ಗೀತಾ ಅವರನ್ನು ಗುರುತಿಸಿದ ವಿಠ್ಠಲ ಹರಿಕಂತ್ರ ಪೊಲೀಸ್ ದೂರು ನೀಡಿದ್ದು, ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page