6

ಯಶೋಧರ ನಾಯ್ಕ ಟ್ರಸ್ಟ್ | ಇನ್ನೊಂದು ಹಣಕಾಸಿನ ಹಗರಣ ಬಯಲು!

ಶಿರಸಿಯ ವಾಣಿ ನಾಯ್ಕ ಅವರು ಬ್ಯಾಂಕಿಗೆ ಪಾವತಿಸಬೇಕಾದ 19 ಲಕ್ಷ ರೂಪಾಯಿಗಳನ್ನು ಸ್ವಂತ ಬಳಕೆಗೆ ಉಪಯೋಗಿಸಿ ವಂಚಿದ್ದಾರೆ.

ಯಶೋಧರ ಟ್ರಸ್ಟ್ ಮೂಲಕ ಕೆವಿಜಿ ಬ್ಯಾಂಕಿನಿoದ ಸ್ವ ಸಹಾಯ ಸಂಘದ ಸದಸ್ಯರಿಗೆ ಸಾಲ ನೀಡಲಾಗಿದ್ದು, ಆ ಸಾಲವನ್ನು ಶಿರಸಿ ಸಿದ್ದಾಪುರ ರಸ್ತೆಯ ನಿಲೇಕಣಿಯ ವಾಣಿ ರಾಘವೇಂದ್ರ ನಾಯ್ಕ (33) ವಸೂಲಿ ಮಾಡುತ್ತಿದ್ದರು. ಹೀಗೆ ವಸೂಲಿ ಮಾಡಿದ ಸಾಲವನ್ನು ಅವರು ಬ್ಯಾಂಕಿಗೆ ಮರು ಪಾವತಿ ಮಾಡದೇ ಸಿಕ್ಕಿ ಬಿದ್ದಿದ್ದಾರೆ.

ಲೆಕ್ಕಾಚಾರ ಮಾಡಿದಾಗ ವಾಣಿ ನಾಯ್ಕ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಒಟ್ಟು 1970763ರೂ ವಂಚಿಸಿರುವುದು ಗೊತ್ತಾಗಿದೆ. ಸಂಘದ ಸದಸ್ಯರ ಹಣ ಪಡೆದು ಅವರಿಗೂ ಅನ್ಯಾಯ ಮಾಡಿದಲ್ಲದೇ, ಟ್ರಸ್ಟ್ ಹಾಗೂ ಟ್ರಸ್ಟ್ ಅಡಿ ಬರುವ ಸಂಘಗಳಿಗೆ ನಂಬಿಕೆ ದ್ರೋಹ ಮಾಡಿದ ಬಗ್ಗೆ ಕುಮಟಾದ ನಾಗವೇಣಿ ಶೆಟ್ಟಿ ದೂರಿದ್ದಾರೆ.

ಇದನ್ನು ಓದಿ: 15 ಲಕ್ಷ ರೂ ವಂಚನೆ: 25 ಲಕ್ಷ ರೂಪಾಯಿಗೆ ಬ್ಲಾಕ್‌ಮೇಲ್!

ನಾಗವೇಣಿ ಶೆಟ್ಟಿ ಅವರು ಯಶೋಧರ ನಾಯ್ಕ ಟ್ರಸ್ಟ್ ವ್ಯವಸ್ಥಾಪಕರಾಗಿದ್ದು, ವಂಚಕಿಯ ವಿರುದ್ಧ ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಶಿರಸಿ ಇಂದಿರಾ ನಗರದ ಮುಸ್ಕಾನ್ ಎಂಬ ಮಹಿಳೆ ಸಹ ಯಶೋಧರ ನಾಯ್ಕ ಟ್ರಸ್ಟಿನ 15 ಲಕ್ಷ ರೂ ವಂಚನೆ ಮಾಡಿದ ಬಗ್ಗೆಯೂ ಪೊಲೀಸ್ ದೂರು ದಾಖಲಾಗಿದೆ.

 

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    One thought on “ಯಶೋಧರ ನಾಯ್ಕ ಟ್ರಸ್ಟ್ | ಇನ್ನೊಂದು ಹಣಕಾಸಿನ ಹಗರಣ ಬಯಲು!”

    Comments are closed.

    You cannot copy content of this page