6

ಕಂಡವರ ಪಾಲಾದ ಕೂಲಿ ಕಾರ್ಮಿಕ ಕೂಡಿಟ್ಟ ಹಣ!

ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಪರಶುರಾಮ ಧಾಮನೆಕರ ತಮ್ಮ ಬ್ಯಾಂಕ್ ಖಾತೆಯಲ್ಲಿ 1.50 ಲಕ್ಷ ರೂ ಹಣವಿಟ್ಟಿದ್ದರು. ಆ ಹಣ ಇದೀಗ ಕಂಡವರ ಪಾಲಾಗಿದೆ!

ಹಳಿಯಾಳದ ಮೊದಲಗೇರಾವಿನ ಪರಶುರಾಮ ಧಾಮನೆಕರ ಜನವರಿ 21ರಂದು ಹಳಿಯಾಳ ಪಟ್ಟಣದ ಅಜರಾ ಬ್ಯಾಂಕ್ ಎಟಿಎಂ ಪ್ರವೇಶಿಸಿದ್ದರು. ತಮ್ಮ ಎಸ್‌ಬಿಐ ಬ್ಯಾಂಕ್ ಕಾರ್ಡನಿಂದ ಅವರು ಹಣ ಪಡೆಯುತ್ತಿದ್ದರು. ಸಾಲಿನಲ್ಲಿ ನಿಂತಿದ್ದ ಅಪರಿಚಿತರು ಎಟಿಎಂ ಪಿನ್ ನಂ ನೋಡಿಕೊಂಡಿದ್ದರು. ಅದಾದ ನಂತರ ಸಹಾಯ ಮಾಡುವ ನೆಪದಲ್ಲಿ ಅವರ ಬಳಿಯಿದ್ದ ಎಟಿಎಂ ಕಾರ್ಡ ಬದಲಿಸಿದ್ದರು.

ಆ ಅಪರಿಚಿತರು ಅದೇ ಕಾರ್ಡ ಹೋಲುವ ಇನ್ನೊಂದು ಕಾರ್ಡನ್ನು ಪರಶುರಾಮ ಧಾಮನೆಕರ ಅವರ ಕೈಗೆ ನೀಡಿ ಯಾಮಾರಿಸಿದ್ದರು. ಈ ಬಗ್ಗೆ ಅವರಿಗೆ ಆ ವೇಳೆ ಅರಿವಿಗೆ ಬಂದಿರಲಿಲ್ಲ. ಅದಾದ ನಂತರ ವಂಚಕರು ಆ ಕಾರ್ಡನ್ನು ಬಳಸಿ ಧಾರವಾಡ, ಗದಗ, ಕಿತ್ತೂರಿನಲ್ಲಿ ಹಣ ಪಡೆದಿದ್ದಾರೆ. ಶಾಪಿಂಗ್ ಕಾಂಪ್ಲೆಕ್ಸಗೆ ತೆರಳಿ ಶಾಫಿಂಗ್ ಸಹ ಮಾಡಿದ್ದು, ಒಟ್ಟು 150198 ರೂ ಹಣವನ್ನು ಬಳಸಿಕೊಂಡಿದ್ದಾರೆ.

ಈ ಬಗ್ಗೆ ಅರಿತ ಪರಶುರಾಮ ಧಾಮನೆಕರ ಹಳಿಯಾಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page