6

ಅಮವಾಸ್ಯೆ: ಮಾಟ-ಮಂತ್ರಕ್ಕೆ ಹೆದರಿದ ಮನ!

ಸಾರ್ವಜನಿಕರನ್ನು ಭಯಪಡಿಸುವ ಮಾಟ-ಮಂತ್ರಗಳ ಪ್ರಭಾವ ಶಿರಸಿ ಹಾಗೂ ಸುತ್ತಮುತ್ತಲು ಹೆಚ್ಚಾಗಿದೆ. ಕುಳವೆ ರಸ್ತೆಯಲ್ಲಿ ಸಹ ಗುರುವಾರ ಮಾಟ-ಮಂತ್ರದ ಕುರುಹುಗಳು ಕಾಣಿಸಿದವು.

ಕುಳವೆ ರಸ್ತೆಯಲ್ಲಿರುವ ಸ್ಮಶಾನ ಎದುರಿನ ಕಚ್ಚಾ ರಸ್ತೆಯಲ್ಲಿ ವಾಮಾಚಾರ ನಡೆಸಿರುವ ಬಗ್ಗೆ ಜನ ಮಾತನಾಡಿಕೊಂಡರು. ಇದಕ್ಕೆ ಸಾಕ್ಷಿಯಾಗಿ ರಸ್ತೆಯ ಮೇಲೆ ದೊಡ್ಡದಾಗಿ ಕುಂಕುಮ ಹರಡಿಕೊಂಡಿತ್ತು. ಅಲ್ಲಲ್ಲಿ ಒಂದಷ್ಟು ಲಿಂಬುಗಳು ಸಹ ಸರಿದಾಡುತ್ತಿದ್ದವು. ಕೆಂಪು ಬಣ್ಣದ ಬಟ್ಟೆಯ ಚೂರುಗಳು ಜನರನ್ನು ಭಯಗೊಳಿಸಿದವು.

ಈ ಮಾರ್ಗವಾಗಿ ಸಂಚರಿಸಬೇಕಿದ್ದ ಜನ ಕುಂಕುಮ-ಲಿoಬು ನೋಡಿ ಮರಳಿ ಮನೆಗೆ ಹೋದರು. ಕೆಲವರು ಧೈರ್ಯ ಮಾಡಿ ಪೇಟೆ ಕಡೆ ಬಂದರಾದರೂ ಇಡೀ ದಿನ ಚಂಚಲ ಮನಸ್ಥಿತಿಯನ್ನು ಹೊಂದಿದ್ದರು. ಅಮವಾಸೆ ರಾತ್ರಿ ವಾಮಾಚಾರ ನಡೆಸಿರುವ ಬಗ್ಗೆ ಕೆಲವರು ಮಾತನಾಡಿದರು.

ಸ್ಮಶಾನ ಎದುರಿನ ಕಚ್ಚಾ ರಸ್ತೆಯಲ್ಲಿ ವಾಮಾಚಾರ ಮಾಡಿದ್ದು ಯಾರು? ಯಾವ ಉದ್ದೇಶಕ್ಕೆ ಹೀಗೆ ಮಾಡಲಾಗಿದೆ? ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಸಂಜೆಯ ವೇಳೆಗೆ ಊರಿನ ವಾತಾವರಣ ಸಹಜ ಸ್ಥಿತಿಗೆ ಮರಳಿದ್ದು, ಅದೇ ರಸ್ತೆ ಮಾರ್ಗವಾಗಿ ಜನ ಎಂದಿನoತೆ ಓಡಾಟ ನಡೆಸಿದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page