6

ಡಿವೈಡರ್’ಗೆ ಗುದ್ದಿದ ಟಿಟಿ: 9 ಜನರಿಗೆ ಗಾಯ

ಕುಮಟಾ: ಹೊನ್ನಾವರದಿಂದ ಕುಮಟಾ ಕಡೆ ಬರುತ್ತಿದ್ದ ಟಿಟಿ ವಾಹನಕ್ಕೆ ಬೀಡಾಡಿ ದನ ಅಡ್ಡ ಬಂದಿದ್ದರಿoದ ವಾಹನ ಅಪಘಾತವಾಗಿದ್ದು, ಟಿಟಿ ವಾಹನದ ಒಳಗಿದ್ದ 9 ಜನರಿಗೆ ಗಾಯವಾಗಿದೆ.
ಜೂ 18ರಂದು ಹಾವೇರಿಯ ಬ್ಯಾಂಕ್ ಉದ್ಯೋಗಿ ರವಿ ಮಳಲಿ ಎಂಬಾತ ತನ್ನ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಕರಾವಳಿ ಭಾಗದ ಪ್ರವಾಸಕ್ಕೆ ಬಂದಿದ್ದ. ಮಧ್ಯಾಹ್ನದ ವೇಳೆ ಹೊನ್ನಾವರದಿಂದ ಹೊರಟ ಅವರ ವಾಹನಕ್ಕೆ ಹೊಳಗದ್ದೆ ಬಳಿ ಬೀಡಾಡಿ ದನ ಅಡ್ಡ ಬಂದಿದ್ದು, ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನ ಚಾಲಕ ಪರಶುರಾಮ ಏಕಾಏಕಿ ಗಾಡಿ ತಿರುಗಿಸಿದ್ದು ರಸ್ತೆಯ ಡಿವೈಡರ್’ಗೆ ಗುದ್ದಿದೆ. ಇದರಿಂದ ವಾಹನದ ಒಳಗಿದ್ದ ರವಿ ಮಲಳಿ, ವಿರೇಶ ಕುಮಾರ, ಶೀಲಾವತಿ, ಸೌಮ್ಯ, ಪೂಜಾ, ಮಹಾಂತೇಶ, ಕರಬಸ್ಸಪ್ಪ ಹಾಗೂ ರೇಖಾ ಎಂಬಾತರಿಗೆ ಗಾಯಗಳಾಗಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page