6

ಟಾಕ್ಟರ್ ಏರಿದ ಹಿಟಾಚಿ ಪಲ್ಟಿ: ಆಪರೇಟರ್ ಸಾವು!

ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಟಾಕ್ಟರ್ ಮೂಲಕ ಸಾಗಿಸುತ್ತಿದ್ದ ಹಿಟಾಚಿ ಟಾಕ್ಟರ್‌ಸಹಿತ ಪಲ್ಟಿಯಾಗಿದ್ದು, ಹಿಟಾಚಿ ಆಪರೇಟರ್ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.

ಹಳಿಯಾಳ ಯಲ್ಲಾಪುರ ರಸ್ತೆಯಲ್ಲಿ ಫೆಬ್ರವರಿ 4ರಂದು ಈ ಅಪಘಾತ ನಡೆದಿದೆ. ತಾಟವಾಳ ಸೇತುವೆಗಿಂತ 2ಕಿಮೀ ಹಿಂದೆ ಟಾಕ್ಟರ್ ಜೊತೆ ಹಿಟಾಚಿ ಪಲ್ಟಿಯಾಗಿದೆ.

ಹಿಟಾಚಿ ಆಪರೇಟರ್ ಸಂದೀಪ ಗಿರಿ ಎಂಬಾತರು ಟಾಕ್ಟರಿನಲ್ಲಿ ಹಿಟಾಚಿಯನ್ನಿರಿಸಿಕೊಂಡು ಟಾಕ್ಟರ್ ಓಡಿಸುತ್ತಿದ್ದರು. ಇನ್ನೊಬ್ಬ ಹಿಟಾಚಿ ಆಪರೇಟರ್ ಪವನ್ ಶರ್ಮಾ ಸಹ ಆ ಟಾಕ್ಟರಿನಲ್ಲಿ ಕುಳಿತಿದ್ದರು.

ಸಂದೀಪ ಗಿರಿ ಟಾಕ್ಟರನ್ನು ವೇಗವಾಗಿ ಓಡಿಸಿದ್ದರಿಂದ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ. ಸಂದೀಪ ಗಿರಿ ಸಾವನಪ್ಪಿದ್ದಾರೆ. ಪವನ್ ಶರ್ಮಾ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.

ಈ ಇಬ್ಬರು ಆಪರೇಟರ್ ಬಿಹಾರದವರಾಗಿದ್ದು, ಹಿಟಾಚಿ ಕೆಲಸಕ್ಕಾಗಿ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದರು. ಅಪಘಾತ ಹಾಗೂ ಸಾವು-ನೋವಿನ ಬಗ್ಗೆ ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page