6

ನೀ ಬರೆಸಿದಂತೆ… ಕಾನ್ಸರ್ ರೋಗಿ ಬದುಕಿಗೆ ಬೆಳಕು!

ಕಳೆದ ವರ್ಷ ಸಪ್ತಪದಿ ತುಳಿದ ಗಣಪತಿ ನಾಯ್ಕ ಮತ್ತು ವಿಮಲಾ ನಾಯ್ಕ ಅವರು ತಮ್ಮ ವಿವಾಹ ವೇದಿಕೆಯಲ್ಲಿ `ನೀ ಬರೆಸಿದಂತೆ’ ಎಂಬ ಕವನ ಸಂಕಲನ ಬಿಡುಗಡೆ ಮಾಡಿದ್ದರು. ಆ ಪುಸ್ತಕ ಮಾರಾಟದಿಂದ ದೊರೆತ ಹಣವನ್ನು ಇದೀಗ ಕಾನ್ಸರ್ ರೋಗಿಗಳ ಚಿಕಿತ್ಸೆಗೆ ನೀಡಿದ್ದಾರೆ!

ಭಟ್ಕಳ ತಾಲೂಕಿನ ಮುಗಳಿಕೋಣೆ ಶ್ರೀ ಗೋಪಾಲಕೃಷ್ಣ ಕಲ್ಯಾಣ ಮಂಟಪ ಸಭಾಭವನದಲ್ಲಿ ಗಣಪತಿ ನಾಯ್ಕ ಮತ್ತು ವಿಮಲಾ ನಾಯ್ಕ ಮದುವೆ ಆಗಿದ್ದರು. ಆ ದಿನ ಸಾಹಿತಿ ಸೆಯದ್ ಜಮೀರುಲ್ಲಾ ಷರೀಫ್ ಅವರು ಗಣಪತಿ ನಾಯ್ಕ ಅವರು ರಚಿಸಿದ ಪುಸ್ತಕ ಬಿಡುಗಡೆ ಮಾಡಿದ್ದರು. 500 ಪುಸ್ತಕಗಳನ್ನು ಮುದ್ರಿಸಿ ಅದನ್ನು ಮಾರಾಟ ಮಾಡಿದ್ದರು. ಆ ಹಣದಿಂದ 25 ಸಾವಿರ ರೂ ಸಿಕ್ಕಿದ್ದು, ಅದನ್ನು ಅವರು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಆರೈಕೆಯಲ್ಲಿರುವ 6 ವರ್ಷದ ಬಾಲಕನ ಚಿಕಿತ್ಸೆಗೆ ನೀಡಿದ್ದಾರೆ. ಜೊತೆಗೆ ಮತ್ತೊಬ್ಬ ಮಹಿಳೆಗೂ ಸಹಾಯ ಮಾಡಿದ್ದಾರೆ.

ಗಣಪತಿ ನಾಯ್ಕ ಅವರು ರೇಡಿಯಂ ಡಿಸೈನಿಂಗ್ ಮಾಡುತ್ತಾರೆ. ಅವರ ಪತ್ನಿ ವಿಮಲಾ ನಾಯ್ಕ ಅವರು ಚಾರ್ಟೆಟ್ ಅಕೊಂಟೆಡ್ ಆಗಿದ್ದಾರೆ. ಬಿಡುವಿನ ವೇಳೆ ಕವನ ಬರೆಯುವುದು ಗಣಪತಿ ನಾಯ್ಕರ ಹವ್ಯಾಸ. ಈ ದಂಪತಿಯ ಕಾರ್ಯಕ್ಕೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾ ಸವಿತಾ ಕಾಮತ್, ವೈದ್ಯರಾದ ಲಕ್ಷ್ಮೀಶ ನಾಯ್ಕ, ಸುರಕ್ಷಿತ ಶೆಟ್ಟಿ ಸಂತಸ ವ್ಯಕ್ತಪಡಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page