6

ಅಂದರ್-ಬಾಹರ್ ಆಡುತ್ತಿದ್ದವರು ಅಂದರ್!

ಜಾತ್ರೆ ಅಂಗವಾಗಿ ಅಂದರ್ – ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರು ಜನ ಸಿಕ್ಕಿ ಬಿದ್ದಿದ್ದಾರೆ.

ಹೊನ್ನಾವರದ ಹೊಸಾಕುಳಿ ಜಾತ್ರೆ ವೇಳೆ ಕೃಷ್ಣ ಸುಬ್ರಾಯ ಹೆಗಡೆ ಹೊಸಾಕುಳಿ ಸಾಣ್ಮನೆ, ಪ್ರವೀಣ ನಾಗೇಶ ನಾಯ್ಕ ಹೊಸಾಕುಳಿ ತಗಟಕೇರಿ, ರಮೇಶ ಮಾರು ಮುಕ್ರಿ ಹೊಳೆಗದ್ದೆ, ರವಿ ಶಂಭು ಹೆಗಡೆ ವಿಲಾಯ್ತಿ, ಸುಬ್ರಹ್ಮಣ್ಯ ಹಮ್ಮು ಗೌಡ ಹೊಸಾಕುಳಿ, ವಿನಯ ಬಾಲಕೃಷ್ಣ ನಾಯ್ಕ ಸಾಲಕೋಡ ಇಸ್ಪೀಟ್ ಆಡುತ್ತಿದ್ದರು. ಉಮಾಮಹೇಶ್ವರ ದೇವಸ್ಥಾನದ ಹತ್ತಿರ ಪೊಲೀಸರು ಅವರು ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ನಡೆಸಿದರು.

ಜೂಜಾಟದ ವೇಳೆ ಆರೋಪಿತರು ಇಸ್ಪಿಟ್ ಎಲೆಗಳೊಂದಿಗೆ ಹಣವನ್ನು ಹರಡಿಕೊಂಡಿದ್ದರು. ಹೀಗಾಗಿ ದಾಳಿ ಸಂದರ್ಭದಲ್ಲಿ 3100 ರೂ ನಗದು, ಇಸ್ಪೀಟ್ ಎಲೆಗಳು ಸಿಕ್ಕವು. ಹೊನ್ನಾವರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page