6

ಅಂದರ್ ಬಾಹರ್ ಆಡುತ್ತಿದ್ದ ಕೃಷಿಕರ ವಿರುದ್ಧ ಕಠಿಣ ಕ್ರಮ

ಕೃಷಿ ಕೆಲಸ ಮುಗಿಸಿ ಕಾಡಂಚಿನ ಪ್ರದೇಶಕ್ಕೆ ತೆರಳಿ ಅಂದರ್ ಬಾಹರ್ ಆಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರನ್ನು ಕಂಡ ತಮ್ಮ ತಪ್ಪನ್ನು ಒಪ್ಪಿಕೊಂಡು ಅಲ್ಲಿಯೇ ನಾಲ್ವರು ಶರಣಾಗಿದ್ದಾರೆ.

ಸಿದ್ದಾಪುರದ ಬಿಳಗಿ ಬಳಿಯ ಕಟ್ಟಿಕೈ ಸೇತುವೆ ಸಮೀಪದ ಕಾಡಿನಲ್ಲಿ ಅದೇ ಊರಿನ ನಾಲ್ವರು ಇಸ್ಪೀಟ್ ಆಡುತ್ತಿದ್ದರು. ಬಿಳಗಿ ಕಟ್ಟಿಕೈ ವೆಂಕಟ್ರಮಣ ಗೌಡ, ಮಾದೇವ ಗೌಡ, ಗೋಳಗೋಡ ಬಸವರಾಜ ಗೌಡ ಹಾಗೂ ಕುರವಂತೆಯ ಅಣ್ಣಪ್ಪ ನಾಯ್ಕ ಅಲ್ಲಿ ಪ್ಲಾಸ್ಟಿಕ್ ಚೀಲ ಹಾಸಿಕೊಂಡು ಕೂತಿದ್ದರು.

ರಾತ್ರಿ ಮೊಂಬತ್ತಿ ಬೆಳಕಿನಲ್ಲಿ ಅವರು ಇಸ್ಪಿಟ್ ಎಲೆಗಳನ್ನು ಹರಡಿಕೊಂಡಿದ್ದು, 1600ರೂ ಹಣವನ್ನು ಅಲ್ಲಿ ಪಂಥವಾಗಿ ಕಟ್ಟಿದ್ದರು. ಸಿದ್ದಾಪುರ ಪೊಲೀಸ್ ನಿರೀಕ್ಷಕ ಜೆಬಿ ಸೀತಾರಾಮ ಅವರು ಅಲ್ಲಿ ದಾಳಿ ನಡೆಸಿದರು. ಆಗ ಎಸ್ಪಿಟ್ ಎಲೆಗಳ ಜೊತೆ ಈ ನಾಲ್ವರು ಸಿಕ್ಕಿ ಬಿದ್ದರು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿದರು.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page