6

ಹೆಬ್ಬರಳಿಗೆ ಕಚ್ಚಿದ ಹಾವು: ಮೂರು ಆಸ್ಪತ್ರೆ ಸುತ್ತಾಡಿದರೂ ಬದುಕದ ರೈತ!

ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರಿಗೆ ಹಾವು ಕಚ್ಚಿದೆ. ಮೂರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಿದರೂ ಅವರು ಬದುಕಲಿಲ್ಲ.

ಹಳಿಯಾಳ ತಾಲೂಕಿನ ಮುರ್ಕವಾಡದಲ್ಲಿನ ಶಿವಾಜಿ ದವಳಿ (64) ಫೆ 11ರಂದು ಗದ್ದೆ ಕೆಲಸ ಮಾಡುತ್ತಿದ್ದರು. ಅಲ್ಲಿ ಕಂಟೆ ಕಡಿಯುತ್ತಿರುವಾಗ ಅವರ ಕೈಗೆ ಪುಟ್ಟದೊಂದು ಹಾವು ಕಚ್ಚಿತು. ಬಲಗೈ ಹೆಬ್ಬರಳಿನಿಂದ ರಕ್ತ ಬರಲು ಶುರುವಾಯಿತು.

ತಕ್ಷಣ ಅವರನ್ನು ಅಲ್ಲಿದ್ದವರು ಮುರ್ಕವಾಡ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದರು. ಮುಂದೆ ಅಲ್ಲಿಂದ ಹಳಿಯಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ವೈದ್ಯರ ಶಿಫಾರಸ್ಸಿನ ಮೇರೆಗೆ ಧಾರವಾಡ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಯಿತು. ಆದರೆ, ಧಾರವಾಡ ಆಸ್ಪತ್ರೆ ವೈದ್ಯರು ಶಿವಾಜಿ ದವಳಿ ಅವರ ಸಾವಿನ ಘೋಷಣೆ ಮಾಡಿದರು.

ಧಾರವಾಡ ಆಸ್ಪತ್ರೆಯ ಶವಾಗಾರದಲ್ಲಿ ಶಿವಾಜಿ ದವಳಿ ಅವರ ಶವವಿದ್ದು, ಸಂಬAಧಿ ಶಾಂತರಾಮ ಕರ್ಲಕೊಪ್ಪ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ಪ್ರಕರಣ ದಾಖಲಾದ ನಂತರ ಆಸ್ಪತ್ರೆಯವರು ಶವ ಬಿಟ್ಟುಕೊಟ್ಟರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page